1 ಮಿಲಿಯನ್ ಡಾಲರ್​​ ಕ್ಲಬ್‌ ಸೇರಿದ 'ಜೈಲರ್'​; ಸಿನಿಮಾ ನೋಡಿ ಫಿದಾ ಆದ ತಲೈವಾ ಫ್ಯಾನ್ಸ್​

Untitled design - 2023-08-10T133006.031
Published on

ತಮಿಳುನಾಡು: ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಭಾಷೆಯ 'ಜೈಲರ್' ಚಿತ್ರ ಇಂದು ವಿಶ್ವಾದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಹಿಂದೆ ಊಹಿಸಿದಂತೆ ಚಿತ್ರವು ಅಮೆರಿಕಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಯೊಂದನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಇದೀಗ ಜೈಲರ್​ ಹೊಸ ದಾಖಲೆ ನಿರ್ಮಿಸಿದೆ.

ಯುಎಸ್ ಬಾಕ್ಸ್ ಆಫೀಸ್​ನಲ್ಲಿ 'ಜೈಲರ್'​ ಚಿತ್ರವು ಹೊಸ ದಾಖಲೆ ಬರೆದಿದ್ದು, 1 ಮಿಲಿಯನ್ ಡಾಲರ್​​ ಮಾರ್ಕ್ ಅನ್ನು ತಲುಪಿದೆ. 2023 ರಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಜೈಲರ್​ ಪಾತ್ರವಾಗಿದೆ. ಸದ್ಯಕ್ಕೆ ಸಿನಿಮಾ ಕುರಿತು ಉತ್ತಮ ವಿಮರ್ಶೆಗಳು ಪ್ರಕಟಗೊಂಡಿದ್ದು, ಟಿಕೆಟ್​ ದರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್​ ಚಿತ್ರದಲ್ಲಿ ರಜನಿಕಾಂತ್​, ತಮನ್ನಾ ಭಾಟಿಯಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ರಮ್ಯಾ ಕೃಷ್ಣನ್, ಮಿರ್ನಾ ಮೆನನ್, ವಸಂತ್ ರವಿ, ವಿಜಯಕನ್, ವಿಟಿವಿ ಗಣೇಶ್, ಯೋಗಿ ಬಾಬು, ಶಿವರಾಜಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಬಿಡುಗಡೆಯ ಮೊದಲ ದಿನವೇ ಚಿತ್ರ ಹೊಸ ದಾಖಲೆಗಳನ್ನು ಬರೆಯುವ ಮುಖೇನ ತಲೈವಾ ಅಭಿಮಾನಿಗಳಿಗೆ ಸಂತಸ ನೀಡಿದೆ,(ಏಜೆನ್ಸೀಸ್). 

to

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net