More

    ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!

    ಸಕಲ ಜೀವರಾಶಿಗಳಿಗೂ ನೀರು ಅತ್ಯವಶ್ಯಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ 3 ರಿಂದ 4 ಲೀಟರ್​ ನೀರು ಕುಡಿಯಬೇಕೆಂದು ಹೇಳುತ್ತಾರೆ. ಅದಕ್ಕಿಂತ ಕಡಿಮೆ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ನೀರು ಕುಡಿದರೂ ಸಮಸ್ಯೆಯೇ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದನ್ನು ಅತಿಯಾಗಿ ಸೇವನೆ ಮಾಡಬಾರದು. ಅತಿಯಾಗಿ ನೀರು ಕುಡಿದರೆ ಏನಾಗಬಹುದು ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.

    ಕಡಿಮೆ ಸಮಯದಲ್ಲಿ ಹೆಚ್ಚು ನೀರು ಕುಡಿದಾಗ ಅಥವಾ ಆರೋಗ್ಯದ ಕಾರಣಗಳಿಂದ ಮೂತ್ರಪಿಂಡದಲ್ಲಿ ಹೆಚ್ಚು ನೀರು ಸಂಗ್ರಹವಾದಾಗ ನೀರಿನ ವಿಷತ್ವ ಉಂಟಾಗುತ್ತದೆ. ಅಂದ್ರೆ ನೀರು ವಿಷವಾಗುತ್ತದೆ.

    ಆಶ್ಲೇ ಸಮ್ಮರ್ಸ್ ಸಾವು

    ಇತ್ತೀಚೆಗೆ ಅಮೆರಿಕದ 35 ವರ್ಷದ ಮಹಿಳೆಯೊಬ್ಬರು ಕೇವಲ 20 ನಿಮಿಷದಲ್ಲಿ ಎರಡು ಲೀಟರ್​ ನೀರು ಕುಡಿದು ಮೃತಪಟ್ಟಿದ್ದಾರೆ. ಆಕೆಯ ಹೆಸರು ಆಶ್ಲೇ ಸಮ್ಮರ್ಸ್. ಯುನೈಟೆಡ್​ ಸ್ಟೇಟ್ಸ್​ನ ಇಂಡಿಯಾನ ಮೂಲದವರು. ಜುಲೈ ನಾಲ್ಕನೇ ವಾರಾಂತ್ಯದಲ್ಲಿ ತಮ್ಮ ಕುಟುಂಬದೊಂದಿಗೆ ವಿಹಾರದಲ್ಲಿದ್ದ ಆಶ್ಲೇ, ತೀವ್ರವಾದ ಶಾಖದಿಂದ ಬದುಕುಳಿಯುವ ಯತ್ನವಾಗಿ ಕಡಿಮೆ ಸಮಯದಲ್ಲಿ ಎರಡು ಲೀಟರ್ ನೀರು ಕುಡಿದಿದ್ದರು. ಆಕೆಯ ಜತೆಯಲ್ಲಿದ್ದವರು ಹೇಳುವ ಪ್ರಕಾರ ಆಶ್ಲೇ ಕೇವಲ 20 ನಿಮಿಷದಲ್ಲಿ 4 ಬಾಟೆಲ್​ ನೀರು ಕುಡಿದಿದ್ದರು.

    ಇದನ್ನೂ ಓದಿ: ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ

    ಸರಾಸರಿ ನೀರಿನ ಬಾಟಲ್ 16 ಔನ್ಸ್ ಅಂದರೆ ಅರ್ಧ ಲೀಟರ್​ ಆಗಿತ್ತು.​ ಆದರೆ ಆಶ್ಲೇ 20 ನಿಮಿಷಗಳಲ್ಲಿ 64 ಔನ್ಸ್ ಅಂದರೆ ಸುಮಾರು ಎರಡು ಲೀಟರ್ ನೀರನ್ನು ಸೇವಿಸಿದರು. ಇದೇ ಆಕೆಯ ಸಾವಿಗೆ ಕಾರಣವಾಗಿರಬಹುದು ಎಂದು ಆಶ್ಲೇ ಅವರ ಹಿರಿಯ ಸಹೋದರ ಡೆವೊನ್ ಮಿಲ್ಲರ್ ಹೇಳುತ್ತಾರೆ. ಅತಿಯಾದ ನೀರು ಕುಡಿದ ಕಾರಣ ಅವರ ಸಾವು ಸಂಭವಿಸಿದೆ ಎಂದು ಆಸ್ಪತ್ರೆಯ ವೈದ್ಯರು ಸಹ ದೃಢಪಡಿಸಿದ್ದಾರೆ.

    ಹೈಪೋನಾಟ್ರೀಮಿಯಾ 

    ರಕ್ತದಲ್ಲಿನ ಸೋಡಿಯಂ ಮಟ್ಟವು ಅಸಹಜವಾಗಿ ಕಡಿಮೆಯಾದಾಗ ಹೈಪೋನಾಟ್ರೀಮಿಯಾ ಸಂಭವಿಸುತ್ತದೆ. ಹೈಪೋನಾಟ್ರೀಮಿಯಾ ಎನ್ನುವುದು ದೇಹವು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವ ಸ್ಥಿತಿಯಾಗಿದೆ. ಅಲ್ಪಾವಧಿಯಲ್ಲಿ ಹೆಚ್ಚು ನೀರು ಕುಡಿಯುವಾಗ ಅಥವಾ ಆರೋಗ್ಯದ ಕಾರಣಗಳಿಗಾಗಿ ಮೂತ್ರಪಿಂಡಗಳು ಹೆಚ್ಚು ನೀರನ್ನು ಹಿಡಿದಿಟ್ಟುಕೊಂಡಾಗ ನೀರಿನ ವಿಷತ್ವ ಸಂಭವಿಸುತ್ತದೆ. ನೀವು ಹೆಚ್ಚು ನೀರು ಕುಡಿದಾಗ ಮತ್ತು ನಿಮ್ಮ ದೇಹದಲ್ಲಿ ಸಾಕಷ್ಟು ಸೋಡಿಯಂ ಇಲ್ಲದಿದ್ದಾಗ ಈ ಮಾರಣಾಂತಿಕ ಆರೋಗ್ಯ ಸ್ಥಿತಿ ಉಂಟಾಗುತ್ತದೆ.

    ಜೀವಕೋಶಗಳಿಗೆ ಪ್ರವೇಶ 

    ರಕ್ತದಲ್ಲಿನ ಸೋಡಿಯಂ ಮಟ್ಟವು ಕಡಿಮೆಯಾದಾಗ, ಹೆಚ್ಚುವರಿ ನೀರು ಜೀವಕೋಶಗಳನ್ನು ಪ್ರವೇಶಿಸುತ್ತದೆ. ಇದರಿಂದ ಜೀವಕೋಶಗಳು ಊದಿಕೊಳ್ಳುತ್ತವೆ. ಒಂದು ವೇಳೆ ಇದೇ ಪರಿಸ್ಥಿತಿ ಮೆದುಳಿನಲ್ಲಿ ಸಂಭವಿಸಿದರೆ, ಇದು ತೀವ್ರ ಗಂಭೀರ ಸ್ಥಿತಿಯಾಗಿರಬಹುದು. ಇದೇ ಸಂದರ್ಭದಲ್ಲಿ ಜೀವಕೋಶಗಳನ್ನು ಪುನರುತ್ಪಾದಿಸಲು ಪ್ರಯತ್ನಿಸುತ್ತಿರುವ ಹೆಚ್ಚುವರಿ ನೀರು ಪ್ರಜ್ಞೆ ತಪ್ಪಲು ಕಾರಣವಾಗುತ್ತದೆ. ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್​)

    ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ? ಸ್ಪಷ್ಟನೆ ನೀಡಿದ ಅಮಿತ್ ಷಾ

    ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ

    ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts