More

    ಟ್ರಾವಲ್ಸ್ ಅಸೋಸಿಯೇಶನ್‌ಗೆ ಬಿ.ಎಸ್.ಪ್ರಶಾಂತ್ ಅಧ್ಯಕ್ಷ

    ಮೈಸೂರು: ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಸೇಫ್ ವೀಲ್ಹ್‌ನ ಬಿ.ಎಸ್.ಪ್ರಶಾಂತ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಡೇವಿಡ್ ರಾಜ್, ಕಾರ್ಯದರ್ಶಿಯಾಗಿ ಕೆ.ಮಂಜುನಾಥ್, ಜಂಟಿ ಕಾರ್ಯದರ್ಶಿಯಾಗಿ ಕೆ.ಸಿ.ರಾಘವೇಂದ್ರ, ಖಜಾಂಚಿಯಾಗಿ ಎಂ.ಅರುಣ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಎಸ್.ಜೆ.ಅಶೋಕ್ ಅವರನ್ನು ಆಯ್ಕೆ ಮಾಡಲಾಯಿತು.
    ನಂಜನಗೂಡು ತಾಲೂಕು ಹುಲ್ಲಹಳ್ಳಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಪ್ರವಾಸೋದ್ಯಮಿಗಳ ನೆಚ್ಚಿನ ನಗರ. ನಮ್ಮ ನಗರಕ್ಕೆ ಇನ್ನು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಹಲವು ವಿನೂತನ ಪ್ರಯತ್ನಗಳನ್ನು ಮಾಡಬೇಕಿದೆ. ಹೆಚ್ಚು ಪ್ರಸಿದ್ಧವಾಗದ ಮೈಸೂರಿನಲ್ಲಿನ ವಿವಿಧ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.
    ಈ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯಪ್ರವೃತ್ತವಾಗಲಿದೆ. ಮೈಸೂರಿನಲ್ಲಿ ಪ್ರವಾಸಿಗರು ಹೆಚ್ಚು ದಿನಗಳ ಕಾಲ ತಂಗಬೇಕು, ಮೈಸೂರಿನ ಹೆಸರು ವಿಶ್ವ ಪ್ರವಾಸೋದ್ಯಮದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಬೇಕು ಎಂಬುದು ನಮ್ಮೆಲ್ಲರ ಗುರಿ ಎಂದು ಹೇಳಿದರು.
    ಕರ್ನಾಟಕ ಟೂರಿಸಂ ಫೋರಂನ ಉಪಾಧ್ಯಕ್ಷ ರವಿ ಮಾತನಾಡಿ, ಪ್ರವಾಸೋದ್ಯಮದ ವಿಷಯದಲ್ಲಿ ಮೈಸೂರಿನಲ್ಲಿ ಹಾಗೂ ಸಾಮಾನ್ಯವಾಗಿ ಎಲ್ಲ ಸ್ಥಳಗಳಲ್ಲಿ ಒಂದಷ್ಟು ಬದಲಾವಣೆಗಳು, ಉನ್ನತೀಕರಣಗಳು ಆಗಬೇಕಿವೆ. ಹೋಟೆಲ್‌ಗಳಲ್ಲಿ ಪ್ರವಾಸಿ ವಾಹನ ಚಾಲಕರಿಗೆ ಇರುವ ವ್ಯವಸ್ಥೆ ಇನ್ನಷ್ಟು ಉನ್ನತೀಕರಣಗೊಳ್ಳಬೇಕು. ಮಾತ್ರವಲ್ಲದೆ ಪ್ರವಾಸಿ ವಾಹನ ಚಾಲಕರಿಗೆ ಇತರ ಸ್ಥಳಗಳಿಂದ ಬರುವ ಪ್ರವಾಸಿಗರೊಂದಿಗೆ ಹೇಗೆ ವ್ಯವಹರಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
    ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ರಾಜೇ ಅರಸ್, ಗೌರವಾಧ್ಯಕ್ಷ ಸಿ.ಎ.ಜಯಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts