More

    ಒಣಗಿದ ಮರಗಳ ತೆರವುಗೊಳಿಸಲಿ

    ಮುಂಡಗೋಡ: ಪಟ್ಟಣ ಹೊರವಲಯದ ಯಲ್ಲಾಪುರ ರಸ್ತೆಯ ಅಕ್ಕಪಕ್ಕದಲ್ಲಿ ಬೃಹತ್ ಮಾವಿನ ಮರಗಳು ಒಣಗಿದ್ದು, ಬೀಳುವ ಹಂತದಲ್ಲಿವೆ. ಅನಾಹುತ ಸಂಭವಿಸುವ ಮೊದಲು ಮರಗಳನ್ನು ತೆರವುಗೋಳಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    ಮುಂಡಗೋಡ-ಯಲ್ಲಾಪುರ ಮಾರ್ಗದಲ್ಲಿನ ಅಮ್ಮಾಜಿ ಕೆರೆಯಿಂದ ಸ್ವಲ್ಪ ಮುಂದೆ ರಸ್ತೆಯ ಅಕ್ಕ ಪಕ್ಕದಲ್ಲಿ ನೂರಾರು ವರ್ಷದ ಮಾವಿನ ಮರಗಳಿವೆ. ಇವುಗಳಲ್ಲಿ ಕೆಲವು ಒಣಗಿವೆ. ಯಾವ ಸಮಯದಲ್ಲಿ ಮರಗಳು ಧರೆಗುರುಳುತ್ತವೆ ಎಂಬುದು ತಿಳಿಯದಾಗಿದೆ.

    ಮಾರ್ಗದಲ್ಲಿ ನಿರಂತರವಾಗಿ ವಾಹನಗಳ ಸಂಚಾರವಿರುತ್ತದೆ. ಹೀಗಾಗಿ, ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆಯವರು ಈ ಮರಗಳನ್ನು ತೆರವುಗೋಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts