More

    ಕಾವೇರಿ ಕ್ರಿಯಾ ಸಮಿತಿಯಿಂದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ

    ಮೈಸೂರು: ಕಾವೇರಿ ಕ್ರಿಯಾ ಸಮಿತಿಯಿಂದ ನಗರದ ಚಿಕ್ಕಗಡಿಯಾರದ ಬಳಿ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಹಿರಿಯರಾದ ಶ್ರೀನಿವಾಸಪ್ರಸಾದ್ ಅವರು ಸದಾ ಕಾಲ ಮಾರ್ಗದರ್ಶನ ನೀಡುತ್ತಿದ್ದರು. ತತ್ವ, ಸಿದ್ಧಾಂತ, ನೇರ ನಡೆ-ನುಡಿಯ ರಾಜಕಾರಣಿಯಾಗಿದ್ದ ಆದರ್ಶವಾದಿ ಪ್ರಸಾದ್ ಅವರು, ನನಗೆ 30 ವರ್ಷಗಳ ಹಿಂದೆಯೇ ನೀವು ವಿಧಾನಸೌಧದ ಮೆಟ್ಟಿಲು ಹತ್ತುತ್ತೀರಿ ಎಂದು ಹಾರೈಸಿದ್ದರು ಎಂದು ಸ್ಮರಿಸಿದರು.
    ಡಾ.ರಾಜ್ ಅಭಿಮಾನಿಗಳ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎನ್. ರಾಮೇಗೌಡ ಮಾತನಾಡಿ, ಕಾವೇರಿ ನೀರಿಗಾಗಿ ಕಾವೇರಿ ಕ್ರಿಯಾ ಸಮಿತಿ ನಿರಂತರ ಹೋರಾಟ ನಡೆಸಬೇಕು. ಪ್ರಸಾದ್ ಅವರು ಕನ್ನಡ, ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಿದ್ದರು ಎಂದರು.
    ಕಾವೇರಿ ಕ್ರಿಯಾ ಸಮಿತಿ ಕಾರ್ಯದರ್ಶಿ ತೇಜೇಶ್‌ಲೋಕೇಶ್‌ಗೌಡ ಮಾತನಾಡಿ, ಮೈಸೂರಿನಲ್ಲಿ ಕಾವೇರಿ ಕ್ರಿಯಾ ಸಮಿತಿಯು ಒಗ್ಗಟ್ಟಿನಿಂದ ತಮಿಳುನಾಡು ಸರ್ಕಾರದ ವಿರುದ್ಧ ಶಾಶ್ವತವಾದ ಪರಿಹಾರಕ್ಕೆ ಹೋರಾಟ ನಡೆಸುತ್ತಿದ್ದು, ಯಾವ ಶಕ್ತಿಯೂ ನಮ್ಮ ಹೋರಾಟವನ್ನು ತಡೆಯಲಾಗದು. ಇದಕ್ಕೆ ನಮಗೆ ಶ್ರೀನಿವಾಸಪ್ರಸಾದ್ ಅವರ ಹೋರಾಟವೆ ಸ್ಫೂರ್ತಿ ಎಂದರು.
    ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ದಿಟ್ಟ, ನೇರ ಮತ್ತು ಅಧಿಕಾರಕ್ಕಾಗಿ ರಾಜಿಯಾಗದ, ತತ್ವ-ಸಿದ್ಧಾಂತಗಳ ತೀರ್ಮಾನಗಳಿಂದ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದರು.
    ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲೆಯ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೂಗೂರು ನಂಜುಂಡಸ್ವಾಮಿ, ಮೆಲ್ಲಹಳ್ಳಿ ಮಹದೇವಸ್ವಾಮಿ ಮಾತನಾಡಿದರು.
    ಕಾವೇರಿ ಕ್ರಿಯಾ ಸಮಿತಿ ಉಪಾಧ್ಯಕ್ಷ ಎಂಜೆ ಸುರೇಶ್‌ಗೌಡ, ಮುಖಂಡರಾದ ಸೋಮಶೇಖರ್, ಬೋಗಾದಿ ಸಿದ್ದೇಗೌಡ, ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ರವೀಶ್, ಸುರೇಶ್ (ಗೋಲ್ಡ್), ಶಿವಲಿಂಗಯ್ಯ, ಪ್ರಭುಶಂಕರ, ರಾಜಶೇಖರ್, ಹೊನ್ನೇಗೌಡ, ಹನುಮಂತಯ್ಯ, ಕೃಷ್ಣಪ್ಪ, ಹನುಮಂತೇಗೌಡ, ಹನುಮಂತಯ್ಯ, ಮಂಜುಳಾ, ನೇಹಾ, ಪುಷ್ಪವತಿ, ವನಿತಾ, ಬಿಳಿಕೆರೆ ಸೌಭಾಗ್ಯಾ, ಆಟೋ ಮಹದೇವ್, ಅಶೋಕ್, ಭಾಗ್ಯಮ್ಮ, ಅಕ್ಬರ್, ವಿಷ್ಣು, ಪ್ರಭಾಕರ್ ಸುಬ್ಬೇಗೌಡ, ಮಹೇಶ್, ವಿಜಯೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts