ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಹಿನ್ನೆಲೆ; ಪುತ್ರಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್​

rajinikanth
Published on

ಬೆಂಗಳೂರು: ಕನ್ನಡ ರಾಜ್ಯೋತ್ಸವದಂದು ರಾಜ್ಯ ಸರ್ಕಾರದ ವತಿಯಿಂದ ಡಾ.ಪುನೀತ್​​ ರಾಜ್​ಕುಮಾರ್​​ ಅವರಿಗೆ ಮರಣೋತ್ತರವಾಗಿ ರಾಜ್ಯದ ಪ್ರತಿಷ್ಠಿತ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಸಲುವಾಗಿ ಮಂಗಳವಾರ (ನ.1) ತಮಿಳು ನಟ ಸೂಪರ್​ಸ್ಟಾರ್​​ ರಜನಿಕಾಂತ್​ ಅವರು ತಮ್ಮ ಮಗಳ ಜತೆಯಲ್ಲಿ ಬೆಂಗಳೂರಿಗೆ ಆಗಮಿಸಿದರು.

ನಗರದ ಹೆಚ್.ಎ.ಎಲ್‌ಗೆ‌ ಆಗಮಿಸಿದ ರಜನಿಕಾಂತ್​ ಅವರನ್ನು ಬಿಜೆಪಿ ಸಚಿವ ಮುನಿರತ್ನ ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಈ ವೇಳೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಸಾಥ್​​ ನೀಡಿದರು. ರಜನಿಕಾಂತ್​​ ಅವರ ಜತೆಯಲ್ಲಿ, ಮಗಳು ಐಶ್ವರ್ಯಾ ರಜನಿಕಾಂತ್​ ಕೂಡ ಆಗಮಿಸಿದರು.

ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ತಯಾರಿಗಳು ನಡೆಯುತ್ತಿವೆ. ರಾಜ್ಯದ ಗಣ್ಯರು, ಸೇರಿದಂತೆ ಹಲವಾರು ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಪುನೀತ್​​ ಕುಟುಂಬದಿಂದ 50 ಜನ ಭಾಗಿಯಾಗುತ್ತಿದ್ದು, ಅವರಿಗೆಲ್ಲಾ ರಾಜ್ಯ ಸರ್ಕಾರ ವಿಶೇಷ ಪಾಸ್​ಗಳನ್ನು ನೀಡಿದೆ. ತೆಲುಗು ನಟ ಜೂನಿಯರ್​​ ಎನ್​ಟಿಆರ್​​, ಗೆಳೆಯನಿಗೆ ಸಿಗುವ ಕರ್ನಾಟಕ ರತ್ನ ಪ್ರಶಸ್ತಿಗೆ ಸಾಕ್ಷಿಯಾಗುವುದಕ್ಕಾಗಿ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net