

ಬೆಂಗಳೂರು: "ಇದು ರಿಯಲ್ ಅಡ್ವೆಂಚರ್" ಎನ್ನುವ ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮದೇ ಸ್ಟೈಲ್ನಲ್ಲಿ ಕನ್ನಡಕ ಹಾಕಿಕೊಳ್ಳುತ್ತಾರೆ. ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರೀಲ್ಸ್ನ “ಮ್ಯಾನ್ ವರ್ಸಸ್ ವೈಲ್ಡ್” ಕಾರ್ಯಕ್ರಮದ 2ನೇ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ತಲೈವಾ ತಮ್ಮದೇ ಲುಕ್ನಲ್ಲಿ ಕಂಡು ಬಂದಿದ್ದಾರೆ.
ಪ್ರೋಮೋವನ್ನು ಟ್ವೀಟ್ ಮಾಡಿರುವ ಬೇರ್ ಗ್ರೀಲ್ಸ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಕಾರಾತ್ಮಕತೆ ಎಂದಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.
ಒಂದು ನಿಮಿಷದ ವಿಡಿಯೋದಲ್ಲಿ ರಜನಿಕಾಂತ್ ಎಟಿವಿ ಬೈಕ್ನಲ್ಲಿ ಆಗಮಿಸುತ್ತಾರೆ. ಹೆಲ್ಮೆಟ್, ಸನ್ ಗ್ಲಾಸ್ ಹಾಕಿಕೊಂಡ ಅವರು ತಮ್ಮದೇ ಶೈಲಿಯಲ್ಲಿಯೇ ಪರಿಚಯವಾಗುತ್ತಾರೆ. ನಂತರ ಬೇರ್ ಗ್ರೀಲ್ಸ್ ಜತೆಗೆ ಪ್ರಯಾಣ. ಹಗ್ಗ ಹಿಡಿದ ರಜನಿಕಾಂತ್ ಇದನ್ನು ಹತ್ತಬೇಕು ಎನ್ನುತ್ತಿರಾ ಎಂದು ಬೇರ್ ಗ್ರೀಲ್ಸ್ಗೆ ಪ್ರಶ್ನಿಸುತ್ತಾರೆ.
ನಂತರ ತೆರೆದ ಜೀಪ್ನಲ್ಲಿ ಹುಲಿ, ಆನೆ ಮತ್ತು ಜಿಂಕೆಯಂತಹ ಕಾಡು ಪ್ರಾಣಿಗಳ ನಡುವೆಯೇ ಪ್ರಯಾಣಿಸುತ್ತಾರೆ. ನಂತರ ಒಂದು ಕೊಳದಲ್ಲಿ ನೀರಿನಲ್ಲಿ ನಡೆಯುತ್ತಾರೆ. ಒಂದು ನಿಮಿಷದ ಪ್ರೋಮೋದಲ್ಲಿ ಇಷ್ಟೆಲ್ಲ ತೋರಿಸಲಾಗಿದೆ. ತಲೈವಾ ರಜನಿ ತಮ್ಮದೇ ಶೈಲಿಯಲ್ಲಿ ಕನ್ನಡಕವನ್ನು ತಿರುಗಿಸಿ ಹಾಕುವಲ್ಲಿಗೆ ಪ್ರೋಮೋ ಮುಕ್ತಾಯವಾಗುತ್ತದೆ.
ಕಾಯಕ್ರಮ ಮಾರ್ಚ್ 23ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನಲ್ನಲ್ಲಿ ಪ್ರಸಾರವಾಗಲಿದೆ. ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ “ಮ್ಯಾನ್ ವರ್ಸಸ್ ವೈಲ್ಡ್” ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್ ಅಲ್ಲದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. (ಏಜೆನ್ಸೀಸ್)