ಮನುಷ್ಯ ಕ್ರೀಯಾಶೀಲವಾಗಿರಲು ಕ್ರೀಡೆ ಮಹತ್ವ; ಬಾಹುಬಲಿ

3-RNR-04
Published on

ರಾಣೆಬೆನ್ನೂರ: ಭಾರತವು ಕ್ರೀಡೆಯಲ್ಲಿ ಸಾಧಿಸಿರುವ ಸಾಧನೆಗಳಿಂತ ನಮ್ಮನ್ನು ಆರೋಗ್ಯಕರ ಮತ್ತು ಸದಾ ಕ್ರೀಯಾಶೀಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿರಿಸಲು ಕ್ರೀಡೆ ಮಹತ್ವದ್ದಾಗಿದೆ ಎಂದು ಧಾರವಾಡದ ಜೆಎಸ್​ಎಸ್​ ಪದವಿ ಪೂರ್ವ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಬಾಹುಬಲಿ ಚೌಗಲಾ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಶ್ರೇಷ್ಠ ಹಾಕಿ ಆಟಗಾರ ಮೇಜರ್​ ದ್ಯಾನ್​ ಚಂದ್​ ಅವರ ಜನ್ಮ ದಿನದಂದು ಅವರ ಸಾಧನೆಯ ಸ್ಮರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದೆ. ಕ್ರೀಡಾಲೋಕದಲ್ಲಿ ಭಾರತದ ಹಾಕಿ ತಂಡ ಅದಿಪತ್ಯ ಮೆರೆಯುವಂತೆ ಮಾಡಿದ್ದವರು ರಾಷ್ಟ್ರೀಯ ಕ್ರೀಡಾ ದಿನವು ಕೇವಲ ಆಚರಣೆ ಅಷ್ಟೇ ಅಲ್ಲ ಕ್ರೀಡೆಗಳು ನಮ್ಮ ಜೀವನವನ್ನು ಹೇಗೆ ಸಮೃದ್ಧಗೊಳಿಸುತ್ತವೆ. ನಮ್ಮನ್ನು ಒಂದು ಸಮುದಾಯವಾಗಿ ಹೇಗೆ ಒಗ್ಗೂಡಿಸುತ್ತವೆ ಎಂಬುದನ್ನು ನೆನಪಿಗೆ ತರವಂತೆ ಮಾಡುವ ದಿನವಾಗಿದೆ ಎಂದರು.

ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಛಾಯಾ ಹುಳ್ಳೇರ, ಮಂಜಪ್ಪ ಸಣ್ಣಬಸಪ್ಪನವರ, ಅಫ್ರೀನ್​ ಕಿತ್ತೂರ, ಚಂದ್ರಕಲಾ ಗಾಳೇರ, ಅಶ್ವಿನಿ ಮೆಹರವಾಡೆ, ಶ್ರೇಯಾ ಬಣ್ಣದ, ಕೌಶಲ ರಾಮಪ್ಪನವರ, ನಾಗರಾಜ ಗವಿಯಪ್ಪನವರ, ಸುನಿತಾ ಕ್ಯಾತಾರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net