ಸೃಜನಶೀಲತೆಯಿಂದ ಸಾಧನೆಯ ಮಾಡಿದರೆ ಯಶಸ್ವಿ

24-RNR-04
Published on

ರಾಣೆಬೆನ್ನೂರ: ಜ್ಞಾನವು ಕೌಶಲ ಸೃಜನಶೀಲತೆ ಜತೆಗೂಡಿ ಕಾರ್ಯ ಪ್ರವೃತ್ತವಾದಾಗ ಮಾತ್ರ ಸಾಧನೆಯ ಶಿಖರ ಏರುವಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಪ್ರಾಚಾರ್ಯ ನಾರಾಯಣ ನಾಯಕ ಹೇಳಿದರು.

ಸ್ಥಳಿಯ ಕೆಎಲ್​ಇ ಸಂಸ್ಥೆಯ, ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಬಿ.ಎ., ಬಿ.ಕಾಂ. ಪ್ರಥಮ ವರ್ಷದ ವಿದ್ಯಾಥಿರ್ನಿಯರ ಓರಿಯೆಂಟೇಷನ್​ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೌಶಲದಲ್ಲಿರುವ ಅಧಮ್ಯ, ಅದ್ಭುತ ಶಕ್ತಿಯು ಎಲ್ಲರಿಗೂ ಒಲಿಯುವಂತೆ ಮಾಡುವ ಕಾರಣ ಅಗೋಚರ ಶಕ್ತಿಯು ಇರುವುದು ಶಿಕ್ಷಣದಲ್ಲಿ ಮಾತ್ರ. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಧೈರ್ಯ ಸ್ಥೆ$ರ್ಯ ಕೌಶಲಾಧಾರಿತ ಶಿಕ್ಷಣದಿಂದ ಸಿದ್ದಿಸುತ್ತದೆ ಎಂದರು.

ಉಪನ್ಯಾಸಕರಾದ ನಾಗರಾಜ ಗವಿಯಪ್ಪನವರ, ಅನುರಾಧ ಎಸ್​., ಎಂ.ಎನ್​. ಸೂರಣಗಿ, ಸುಜಾತ ಹುಲ್ಲೂರ, ವಿದ್ಯಾಶ್ರೀ ದಾಮೋದರ, ಕೃಷ್ಣ ಎಲ್​.ಎಚ್​. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net