

ರಾಣೆಬೆನ್ನೂರ: ಪ್ರಜಾಪ್ರಭುತ್ವ, ಚುನಾವಣೆ ಮತ್ತು ಮತದಾನ ಒಂದಕ್ಕೊಂದು ನಿಕಟವಾದ ಸಂಪರ್ಕ ಮತ್ತು ಸಂಬಂಧ ಹೊಂದಿರುವ ತ್ರಿಕೋನ ಅಂಶಗಳು. ನಾಗರಿಕರು ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿ ಬೆಳವಣಿಗೆಗೆ ಸೂಕ್ತ ಜನ ಪ್ರತಿನಿಧಿಗಳ ಆಯ್ಕೆ ಮಾಡಬೇಕು ಎಂದು ಪ್ಯಾನಲ್ ವಕೀಲ ಕುಮಾರ ಮಡಿವಾಳರ ಹೇಳಿದರು.
ಸ್ಥಳಿಯ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವಿದ್ಯಾಥಿರ್ ಒಕ್ಕೂಟ ರಚನೆ ಮತ್ತು ಪ್ರಮಾಣ ವಚನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಸರ್ಕಾರ ರಚಿಸಿದರೆ ಮಾತ್ರ ದೇಶದ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಸೂಕ್ತ ಅಭ್ಯಥಿರ್ಗಳಿಗೆ ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಥಿರ್ ಒಕ್ಕೂಟದ ಕಾರ್ಯಾಧ್ಯಕ್ಷ ನಾಗರಾಜ ಗವಿಯಪ್ಪನವರ, ಪ್ರಮುಖರಾದ ಪೃತ್ವಿ ಎ.ಬಿ., ಕೃಪಾ ಮೋಟೆಬೆನ್ನೂರ, ಸೋಮಶೇಖರ ಹೊನ್ನಾಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.