ವಿಶ್ವ ವಿದ್ಯಾಲಯಕ್ಕೆ ಬ್ಲೂ ಆಗಿ ಆಯ್ಕೆ

je721538035802367-abc
Published on

ರಾಣೆಬೆನ್ನೂರ: ವಿಜಯಪುರದ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಲ್​ ಬ್ಯಾಡ್ಮಿಂಟನ್​ ಪಂದ್ಯಾವಳಿಯಲ್ಲಿ ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ನಾಲ್ಕು ವಿದ್ಯಾಥಿರ್ನಿಯರು ವಿಶ್ವ ವಿದ್ಯಾಲಯದ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

ಪ್ರಿಯಾಂಕ ಎ., ಗಿರಿಜಾ ಎಲ್​., ಪ್ರಿಯಾಂಕ ಕೆ., ಅಕ್ಷತಾ ಎಂ.ಯು. ಆಯ್ಕೆಯಾಗಿರುವ ವಿದ್ಯಾಥಿರ್ನಿಯರು. ಮಾ. 27ರಂದು ಅಳಗಪ್ಪಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಆಲ್​ ಇಂಡಿಯಾ ಅಂತರ ವಿಶ್ವವಿದ್ಯಾಲಯಗಳ ಬಾಲ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಲೇಜ್​ನ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net