ರಾಜ ರಾಜೇಶ್ವರಿ ಕಾಲೇಜ್​ನ ಮಕ್ಕಳು ಕ್ರೀಡಾಕೂಟದಲ್ಲಿ ವಿಜೇತರು

16-RNR-08
Published on

ರಾಣೆಬೆನ್ನೂರ: ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024&-25ನೇ ಸಾಲಿನ ಅಂತರ ಮಹಿಳಾ ಮಹಾವಿದ್ಯಾಲಯಗಳ ಏಕವಲಯ ಪಂದ್ಯಾವಳಿಯಲ್ಲಿ ರಾಜೇಶ್ವರಿ ಮಹಾವಿದ್ಯಾಲಯದ ವಿದ್ಯಾಥಿರ್ನಿಯರು ವಿವಿಧ ವಿಭಾಗದಲ್ಲಿ ಜಯಗಳಿಸಿದ್ದಾರೆ.

ಖೋ ಖೋ ಹಾಗೂ ಬಾಲ್​ ಬ್ಯಾಡ್ಮಿಂಟನ್​ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಖೋ ಖೋ ಕ್ರೀಡಾಕೂಟದಲ್ಲಿ ಸುನಿತಾ ಕ್ಯಾತಾರಿ ಉತ್ತಮ ಆಟಗಾತಿರ್ ಮತ್ತು ಉತ್ತಮ ಚೇಜರ್​ ಆಗಿ ಚಂದ್ರಕಲಾ ಗಾಳಿ ಹೊರ ಹೊಮ್ಮಿದರು. ಬಾಲ್​ ಬ್ಯಾಡ್ಮಿಂಟನ್​ ಪಂದ್ಯಾವಳಿಯಲ್ಲಿ ಪ್ರಿಯಾಂಕಾ ಅಸುಂಡಿ ಆಲ್​ ರೌಂಡರ್​ ಆಗಿ ಹೊರಹೊಮ್ಮಿದರು.

400 ಮೀಟರ್​ ರಿಲೇಯಲ್ಲಿ ಚಂದ್ರಕಲಾ ಗಾಳೇರ ದ್ವೀತಿಯ ಸ್ಥಾನ, 200 ಮೀಟರ್​ ರಿಲೇಯಲ್ಲಿ ಸುನಿತಾ ಕ್ಯಾತಾರಿ ದ್ವೀತಿಯ, 400 ಮೀಟರ್​ ರಿಲೇಯಲ್ಲಿ ಪವಿತ್ರ, ಕಾವ್ಯ, ಸೌಂದರ್ಯ, ದಾನೇಶ್ವರಿ ದ್ವೀತಿಯ ಸ್ಥಾನ ಗಳಿಸಿದ್ದಾರೆ. ವಾಲಿಬಾಲ್​ ಪಂದ್ಯಾವಳಿಯಲ್ಲಿ ದ್ವೀತಿಯ ಸ್ಥಾನ ಗಳಿಸಿದೆ. ಒಟ್ಟು 15 ಜನ ವಿದ್ಯಾಥಿರ್ನಿಯರು ವಿಶ್ವವಿದ್ಯಾನಿಲಯದ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net