ನಾಯಕತ್ವ ಗುಣ ಬಹಳ ಪ್ರಾಮುಖ್ಯತೆ; ಕುಮಾರ ಬೆಣ್ಣಿ

24-RNR-08
Published on

ರಾಣೆಬೆನ್ನೂರ: ವಿದ್ಯಾಥಿರ್ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಧೈರ್ಯ ಮತ್ತು ಗುರಿಗಳ ಬಗ್ಗೆ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂವಹನ ಹಾಗೂ ನಾಯಕತ್ವ ಗುಣ ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಜೆಸಿಐ ಘಟಕದ ತಾಲೂಕು ಅಧ್ಯಕ್ಷ ಕುಮಾರ ಬೆಣ್ಣಿ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜೆಸಿಐ ತಾಲೂಕು ಟಕದ ವತಿಯಿಂದ ವಿದ್ಯಾಥಿರ್ಗಳಿಗಾಗಿ ಸೋಮವಾರ ಆಯೋಜಿಸಿದ್ದ ಸಂವಹನ ಮತ್ತು ನಾಯಕತ್ವ ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಮಾಣಿಕತೆ, ವಿಶ್ವಾಸ, ಬದ್ಧತೆ ಮತ್ತು ಸೃಜನಶೀಲತೆ ನಾಯಕತ್ವದ ಗುಣಗಳಾಗಿವೆ. ಈ ನಿಟ್ಟಿನಲ್ಲಿ ವಿದ್ಯಾಥಿರ್ಗಳು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಇದರ ಜೊತೆಗೆ ಕಠಿಣ ಪರಿಶ್ರಮ, ಕ್ರಿಯಾಶೀಲತೆ ವಿದ್ಯಾಥಿರ್ ಜೀವನದಲ್ಲಿ ಅವಶ್ಯವಾಗಿದೆ. ದೇಶದ ಭವಿಷ್ಯ ನಿಮಾರ್ಣ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವ ಯುವಕರಿಗೆ ಉತ್ತಮ ಮಾರ್ಗದರ್ಶನ ಮತ್ತು ಉದಾತ್ತ ಚಿಂತನೆಗಳ ಅಗತ್ಯವಿದೆ ಎಂದರು.

ಜೆಸಿಐ ಜೋನ್​ ಚೇರ್ಮನ್​ ಪ್ರಭುಲಿಂಗಪ್ಪ ಹಲಗೇರಿ ಮಾತನಾಡಿ, ವಿದ್ಯಾಥಿರ್ಗಳ ಏಳಿಗೆಗೆ ಸಂವಹನ ಹಾಗೂ ನಾಯಕತ್ವ ಜೀವನಕ್ಕೆ ಅತ್ಯಮೂಲ್ಯವಾಗಿದೆ. ನಿಸ್ವಾರ್ಥ ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ಬಲಿಷ್ಠ ರಾಷ್ಟ್ರ ನಿಮಾರ್ಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದರು.

ಪ್ರಮುಖರಾದ ಪ್ರಮೋದ್​ ಶಾಸ್ತ್ರೀ, ರೇಖಾ ಶಿಡೇನೂರು, ಅಶೋಕ ದುರ್ಗದಸೀಮೆ, ವಿದ್ಯಾಧರ ಹಲಗೇರಿ, ಭೋಜರಾಜ ಗುಲಗಂಜಿ, ವಿನಾಯಕ ಕುಮಾರ ಗುಲಗಂಜಿ, ವಿನಾಯಕ ಎಕ್ಕನಹಳ್ಳಿ, ಪ್ರಕಾಶ ಗಚ್ಚಿನಮಠ, ಜಯಣ್ಣ ಕರಡೆರ, ಶಿವಾನಂದ ಹಿತ್ತಲಮನಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net