ರಾಜಸ್ಥಾನ ಕಾಮನ್ ವೆಲ್ತ್ ಸಮ್ಮೇಳನಕ್ಕೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

u t kadar
Published on

ಬೆಂಗಳೂರು:

ರಾಜಸ್ಥಾನದ ಉದಯಪುರದಲ್ಲಿ ಆ.21 ಮತ್ತು 22ರಂದು ನಡೆಯಲಿರುವ 9ನೇ ಕಾಮನ್ ವೆಲ್ತ್ ಸಂಸದೀಯ ಸಂಘದ ಭಾರತೀಯ ವಲಯದ ಸಮ್ಮೇಳನದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.

ಡಿಜಿಟಲ್ ಸಬಲೀಕರಣ ಮೂಲಕ ಉತ್ತಮ ಆಡಳಿತವನ್ನು ಪ್ರೋತ್ಸಾಹಿಸುವಲ್ಲಿ ಸಾರ್ವಜನಿಕ ಪ್ರತಿನಿಧಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ/ದಕ್ಷರನ್ನಾಗಿ ಮಾಡುವುದು ಹೇಗೆ ಎನ್ನುವ ವಿಷಯದ ಬಗ್ಗೆ ಖಾದರ್ ಮಾತನಾಡಲಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅಧ್ಯಕ್ಷತೆ ವಹಿಸಲಿದ್ದು, ಎಲ್ಲಾ ರಾಜ್ಯಗಳ ಸ್ಪೀಕರ್ ಮತ್ತು ಕಾರ್ಯದರ್ಶಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net