ರಾಜಸ್ಥಾನದ ವಿಧಾನಸಭಾ ಅಧಿವೇಶನಕ್ಕೆ ರಾಜ್ಯಪಾಲರಿಂದ ಮೂರು ಷರತ್ತುಗಳು; ಸದ್ಯಕ್ಕಂತೂ ಕಷ್ಟ, ಮುಂದೇನು?

kalraj mishra
Published on

ಜೈಪುರ: ರಾಜಸ್ಥಾನದಲ್ಲಿ ವಿಧಾಸಭಾ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ರಾಜ್​ ಮಿಶ್ರಾ ಸೋಮವಾರ ಅನುಮತಿ ನೀಡಿದ್ದಾರೆ. ಆದರೆ ಅದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ.

ಕಳೆದರೆಡು ದಿನಗಳಿಂದ ರಾಜ್ಯಪಾಲರ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಬಳಿಕ ಫಲಿತಾಂಶ ಹೊರಬಿದ್ದಂತಾಗಿದೆ. ಸಿಎಂ ಅಶೋಕ್​ ಗೆಹ್ಲೋಟ್​ ವಿಧಾನಸಭೆ ಕಲಾಪ ನಡೆಸುವ ಎರಡನೇ ಪ್ರಸ್ತಾವನೆಯಲ್ಲಿ ವಿಶ್ವಾಸಮತ ಯಾಚನೆಯ ಪ್ರಸ್ತಾವನೆ ಇಲ್ಲದ್ದಕ್ಕೆ ರಾಜ್ಯಪಾಲರ ಸ್ಪಷ್ಟನೆ ಕೋರಿದ್ದಾರೆಂದು ಹೇಳಲಾಗಿತ್ತು.

ಇದೀಗ ಎಲ್ಲದ್ದಕ್ಕೂ ತೆರೆ ಎಳೆದು, ಅಧಿವೇಶನ ನಡೆಸಲು ಅನುಮತಿ ನೀಡಿದ್ದಾರೆ. ಆದರೆ, ಅಧಿವೇಶನಕ್ಕೂ ಮುನ್ನ ಶಾಸಕರಿಗೆ 21 ದಿನಗಳ ನೋಟಿಸ್​ ನೀಡಬೇಕು ಎಂದು ಸೂಚಿಸಿದ್ದಾರೆ.

ಒಂದು ವೇಳೆ ಅಧಿವೇಶನದ ಸಮಯದಲ್ಲಿ ವಿಶ್ವಾಸಮತ ಯಾಚಿಸುವುದೇ ಆಗಿದ್ದಲ್ಲಿ ಅಧಿವೇಶನದ ನೇರ ಪ್ರಸಾರ ನಡೆಸಬೇಕು ಎಂದು ಷರತ್ತು ಹಾಕಿದ್ದಾರೆ. ಜತೆಗೆ, 200 ಶಾಸಕರು ಹಾಗೂ ವಿಧಾನಸಭೆ 1000ಕ್ಕೂ ಅಧಿಕ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಈ ನಡುವೆ, ರಾಜ್ಯಪಾಲರ ನಡೆಗೆ ಬೇಸತ್ತು ಪ್ರಧಾನಿ ಮೋದಿ ಜತೆಗೆ ಈ ವಿಚಾರವಾಗಿ ಮಾತನಾಡಿದ್ದೇನೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಹೇಳಿದ್ದಾರೆ. ಇದಲ್ಲದೆ, ಶಾಸಕರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net