ವೀರಶೈವ ಸಹಕಾರ ಸಂಘಕ್ಕೆ ರಾಜಶೇಖರ್ ಅಧ್ಯಕ್ಷ

Veerashaiva
ಚಿಕ್ಕಮಗಳೂರಿನ ವೀರಶೈವ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಜಿ.ಎಂ.ರಾಜಶೇಖರ್, ಉಪಾಧ್ಯಕ್ಷ ಬಿ.ಸಿ.ಗಿರೀಶ್ ಅವರನ್ನು ನಿರ್ದೇಶಕರು ಸನ್ಮಾನಿಸಿದರು.
Published on

ಚಿಕ್ಕಮಗಳೂರು: ನಗರದ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ಗಿರೀಶ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಜಿ.ಎಂ.ರಾಜಶೇಖರ್ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಸಮಾಜದ ಕೊಡುಗೆ ಅಪಾರ ಎಂದರು.
ಸಹಕಾರ ಸಂಘವು ಕಳೆದ ೧೦ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದೆ. ೨,೦೦೦ಕ್ಕೂ ಅಽಕ ಷೇರುದಾರರನ್ನು ಹೊಂದಿದ್ದು, ಸುಮಾರು ೧೨ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಸಂಘದಿAದ ಷೇರುದಾರರಿಗೆ ವೇತನ ಆಧಾರಿತ ಸಾಲ, ವೈಯಕ್ತಿಕ ಸಾಲ, ಗೃಹ ನಿರ್ಮಾಣ ಹಾಗೂ ವಾಹನಗಳು, ವ್ಯಾಪಾರ ಅಭಿವೃದ್ಧಿ, ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಸೇರಿದಂತೆ ೪.೮೦ ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಚುನಾವಣಾಽಕಾರಿಯಾಗಿ ಡಿ.ಟಿ.ನಾಗರಾಜ್ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ಬಿ.ಸಿ.ಗಿರೀಶ್, ನಿರ್ದೇಶಕರಾದ ಕೆ.ಒ.ಓಂಕಾರಪ್ಪ, ಕೆ.ವಿ.ಶಿವಕುಮಾರ್, ಸಿ.ಬಿ.ನಂದೀಶ್, ಹೇಮಂತ್‌ಕುಮಾರ್, ಎಲ್.ಸಿ.ಜಗದೀಶ್, ಬಿ.ಸಿ.ಭಾರತಿ ಶಿವರುದ್ರಪ್ಪ, ತನುಜಾ ರಾಜೇಶ್, ಸಿ.ಯೋಗಾನಂದ, ಮಾಜಿ ಸದಸ್ಯರಾದ ಓಂಕಾರಪ್ಪ, ಎಲ್.ಬಿ.ಹುಲಿಯಪ್ಪ, ಷೇರುದಾರರಾದ ಕೆ.ಎಸ್.ಮನೋಜ್, ಜೆ.ಡಿ.ವಿಜಯೇಂದ್ರ, ಎಂ.ಬಿ.ಗAಗಾಧರ್, ಬಿ.ಜೆ.ರಾಜೇಶ್, ಎಲ್.ಜೆ.ಮೋಹನ್, ಸಿಇಒ ಷಡಕ್ಷರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net