

ಚೆನ್ನೈ: ವೆಟ್ಟೈಯಾನ್ ಚಿತ್ರ ಬಿಡುಗಡೆಯಾಗಿ ಒಂದು ವಾರ ಪೂರ್ಣಗೊಂಡಿದೆ. ಗಳಿಕೆಯ ವಿಷಯದಲ್ಲಿ ಈ ಚಿತ್ರವು ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಅದ್ಬುತವಾದ ಅಭಿನಯವನ್ನು ನೀಡುವ ಮೂಲಕ ರಜನಿಕಾಂತ್(Rajanikanth) ಅಭಿನಯದ ವೆಟ್ಟೈಯಾನ್ ಯಶಸ್ಸಿನ ಹಾದಿಯಲ್ಲಿದೆ.
ದಸರಾ ಹಬ್ಬದ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ರಜನಿಕಾಂತ್ ಅವರ ವೆಟ್ಟೈಯಾನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ, ಈ ಚಿತ್ರವು ಹಿರಿತೆರೆಯಲ್ಲಿ ಪ್ರೇಕ್ಷಕರ ಮೊದಲ ಆಯ್ಕೆಯಾಗಿ ಉಳಿದಿದೆ. ವೆಟ್ಟೈಯಾನ್ ವೀಕ್ಷಿಸಲು ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಥಿಯೇಟರ್‌ಗಳತ್ತ ಬರುತ್ತಿದ್ದಾರೆ.
ಬಿಡುಗಡೆಯಾದ 7ನೇ ದಿನಕ್ಕೆ ವೆಟ್ಟೈಯನ್ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬುಧವಾರ(ಅ.17) ಈ ಚಿತ್ರ ಎಲ್ಲಾ ಭಾಷೆಗಳಲ್ಲಿ 4 ಕೋಟಿ ದಾಟಿದೆ. ಮಂಗಳವಾರ(ಅ.16)ದ ಕಲೆಕ್ಷನ್ ಹೋಲಿಕೆ ಮಾಡಿದರೆ, ಬುಧವಾರದ ಗಳಿಕೆಯಲ್ಲಿ ಗಮನಾರ್ಹ ವ್ಯತ್ಯಾಸವಿಲ್ಲ.
ಈ ಮೂಲಕ ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಸದ್ಯ ಬಾಕ್ಸ್ ಆಫೀಸ್ ನಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಳ್ಳುತ್ತಿದೆ. ಈ ಚಿತ್ರಕ್ಕೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಿಂದ ಉತ್ತಮ ರೆಸ್ಪಾನ್ಸ್ ಬಂದಿದೆ.
ಮೊದಲ ವಾರದಲ್ಲಿ ವೆಟ್ಟೈಯನ್ ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರಕಾರ, ಒಟ್ಟು 119 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಮುಂದಿನ ವಾರಾಂತ್ಯದಲ್ಲಿ ಈ ಚಿತ್ರವು 150 ಕೋಟಿ ರೂಪಾಯಿ ಸುಲಭವಾಗಿ ದಾಟಲಿದೆ ಎಂದು ನಂಬಲಾಗಿದೆ.