RIL Bonus: ರಿಲಯನ್ಸ್ ಬೋನಸ್ ವಿತರಣೆಗೆ ದಿನಾಂಕ ಫಿಕ್ಸ್​..ಷೇರುಗಳಲ್ಲಿ ಏರಿಕೆ!

mukesh ambani
Published on

ಮುಂಬೈ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳ ಬೋನಸ್(RIL Bonus:) ವಿತರಣೆಗೆ ದಿನಾಂಕವನ್ನು ಪ್ರಕಟಿಸಿದೆ.

ರಿಲಯನ್ಸ್ ಕಳೆದ ತಿಂಗಳಷ್ಟೇ 1:1 ರ ಅನುಪಾತದಲ್ಲಿ ಷೇರುಗಳ ಬೋನಸ್ ನೀಡುವುದಾಗಿ ಘೋಷಿಸಿತ್ತು. ಆದರೆ, ಕೆಲ ತಾಂತ್ರಿಕ ತೊಂದರೆಗಳಿಂದ ದಿನಾಂಕ ಪ್ರಕಟಿಸಲು ವಿಳಂಬವಾಗಿತ್ತು.

ಮುಕೇಶ್ ಅಂಬಾನಿ ಸೆಪ್ಟೆಂಬರ್ 5 ರಂದು ಬೋನಸ್ ಷೇರುಗಳ ಉಡುಗೊರೆಯನ್ನು ಘೋಷಿಸಿದ್ದರು. ಈದೀಗ ಇದೇ ಅ.28 ರಂದು ಬೋನಸ್ ವಿತರಣೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಬೋನಸ್ ಷೇರುಗಳನ್ನು 1:1 ಅನುಪಾತದಲ್ಲಿ ನೀಡಲಾಗುವುದು. ಅಂದರೆ ಅಕ್ಟೋಬರ್ 28, 2024 ರವರೆಗೆ ತಮ್ಮ ಡಿಮ್ಯಾಟ್ ಖಾತೆಯಲ್ಲಿ ರಿಲಯನ್ಸ್ ಷೇರುಗಳನ್ನು ಹೊಂದಿರುವ ಷೇರುದಾರರು ಒಂದು ಷೇರಿನ ಮೇಲೆ ಬೋನಸ್ ಪಡೆಯುತ್ತಾರೆ.

ರಿಲಯನ್ಸ್ ಆರನೇ ಬಾರಿಗೆ ಬೋನಸ್ ಷೇರುಗಳನ್ನು ನೀಡಲಿದೆ. ಇದಕ್ಕೂ ಮೊದಲು, ಟೆಲಿಕಾಂ ವಲಯಗಳಿಗೆ ತೈಲ ವ್ಯಾಪಾರ ಮಾಡುವ ಕಂಪನಿಯು 1980, 1983, 1997, 2009 ಮತ್ತು 2017 ರಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ರಿಲಯನ್ಸ್ 2017 ರಲ್ಲಿ 1:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು.

ಬೋನಸ್ ವಿತರಣೆಯ ದಾಖಲೆ ದಿನಾಂಕವನ್ನು ಖಚಿತಪಡಿಸಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಷೇರುಗಳು ಶೇ.0.73 ಅಂದರೆ 2,727.95 ರೂ.ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net