ರಾಜಮೌಳಿ ಪತ್ನಿ ರಮಾರನ್ನು ಪ್ರೀತಿಸುತ್ತಿದ್ದರೇ ಶ್ರೀನಿವಾಸ ರಾವ್! ಏನಿದು ಟ್ರಯಾಂಗಲ್‌ ಲವ್‌ ಸ್ಟೋರಿ? Rajamouli

Rajamouli - Final
Published on

ನಾನು ಮದುವೆ ಆಗದೇ ಇರಲು Rajamouli ಕಾರಣ

ಹೈದ್ರಾಬಾದ್​​ : ( Rajamouli )  ಟಾಲಿವುಡ್‌ನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸ್ನೇಹಿತ ಉಪ್ಪಲಪತಿ ಶ್ರೀನಿವಾಸ್ ರಾವ್ ಅವರು ಮಾಡಿರುವ ಆರೋಪಗಳು ಈಗ ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದೆ.

ಆರ್​ಆರ್​ಆರ್​, ಬಾಹುಬಲಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎಸ್​.ಎಸ್. ರಾಜಮೌಳಿ (SS Rajamouli) ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಸ್ಟಾರ್ ನಿರ್ದೇಶಕನ ಬಂಧನವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ರಾಜಮೌಳಿಯ ಸ್ನೇಹಿತ ಹಾಗೂ 'ಯಮದೊಂಗ' ಸಿನಿಮಾ ಕಾರ್ಯಕಾರಿ ನಿರ್ಮಾಪಕ ಉಪ್ಪಾಲಪಟಿ ಶ್ರೀನಿವಾಸ ರಾವ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಇದಕ್ಕೆ ರಾಜಮೌಳಿಯೇ ಕಾರಣ ಅಂತ ಹೇಳಿ ನಾಪತ್ತೆಯಾಗಿದ್ಧಾರೆ. ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆಂದು ಈ ವಿಡಿಯೋದಲ್ಲಿ ಆರೋಪಿಸಿದ್ದರು.  ಪೊಲೀಸರು ಪ್ರಕರಣದ ವಿಚಾರಣೆಯನ್ನು ಆರಂಭಿಸಿದ್ದಾರೆ.

1990 ರಿಂದ ಅವರ ಸ್ನೇಹವನ್ನು ಉಲ್ಲೇಖಿಸುತ್ತಾ, ಶ್ರೀನಿವಾಸ್ ರಾವ್ ಅವರು ರಾಜಮೌಳಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದೇನೆ, ಆದರೆ ಈಗ ರಾಜಮೌಳಿಯಿಂದಾಗಿ ಅವರು ಆಳವಾದ ಭಾವನಾತ್ಮಕ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ. ತಾನು ಸತ್ತರೆ ರಾಜಮೌಳಿಯೇ ಹೊಣೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದರು. ಈ ಪತ್ರದ ಜೊತೆಗೆ ಒಂದು ವಿಡಿಯೋ ಕೂಡ ಹೊರಬಂದಿದೆ.

ಯಮದೊಂಗ ಚಿತ್ರದ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ ರಾವ್ ಅವರು ಸಾಯುವ ಮೊದಲು ರಾಜಮೌಳಿ (SS Rajamouli) ಅವರ ಆಪ್ತರಿಗೆ ಸೆಲ್ಫಿ ವಿಡಿಯೋ ಮತ್ತು ಪತ್ರ ಒಂದನ್ನು ಕಳುಹಿಸಿದ್ದು, ನಾನು ಹಾಗೂ ರಾಜಮೌಳಿ ಒಬ್ಬಳೇ ಯುವತಿಯನ್ನು ಪ್ರೀತಿಸಿದ್ದೆವು. ಆದರೆ ಆಗ ರಾಜಮೌಳಿ, ನೀನು ತ್ಯಾಗ ಮಾಡು ಅಂದು, ನಾನು ಸಹ ಹಾಗೆಯೇ ಮಾಡಿದೆ. ಆ ನಂತರ ಈವರೆಗೆ ನಾನು ಯಾರನ್ನೂ ಮದುವೆ ಆಗಲಿಲ್ಲ . ಚಿತ್ರಹಿಂಸೆ ತಾಳಲಾರದೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.  ಶ್ರೀನಿವಾಸ್ ರಾವ್ ಮಾಡಿರುವ ಹೆಚ್ಚಿನ ಆರೋಪಗಳು ಆಧಾರರಹಿತವಾಗಿರುವುದರಿಂದ, ಇದು ವೈಯಕ್ತಿಕ ದ್ವೇಷ ಅಥವಾ ನೋವುಂಟುಮಾಡುವ ಉದ್ದೇಶದಿಂದ ಮಾಡಲಾದ ಆರೋಪ ಎಂದು ನಂಬಲಾಗಿದೆ. ಟಾಲಿವುಡ್‌ನ ದಂತಕಥೆ ನಿರ್ದೇಶಕರೊಬ್ಬರ ವಿರುದ್ಧ ಇಂತಹ ಟೀಕೆ ಕೇಳಿಬರುತ್ತಿರುವುದು ಇದೇ ಮೊದಲು.

ಈ ವಿಷಯವು ಪ್ರಸ್ತುತ ಪೊಲೀಸ್ ತನಿಖೆಯಲ್ಲಿದ್ದರೂ, ರಾಜಮೌಳಿ ಇದುವರೆಗೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ನಿಜಾನಾ? ಅಥವಾ ಬೇರೆ ಯಾರಾದರೂ ರಾಜಮೌಳಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಯೇ? ಪೊಲೀಸರು ಶೀಘ್ರದಲ್ಲೇ ಈ ವಿಷಯವನ್ನು ಬೆಳಕಿಗೆ ತರಲಿದ್ದಾರೆ.

ಏನಿದು ಟ್ರಯಾಂಗಲ್‌ ಲವ್‌ ಸ್ಟೋರಿ?

ಜಕ್ಕಣ್ಣ 'ಶಾಂತಿ ನಿವಾಸಂ' ಅನ್ನೋ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದರು. ಆ ವೇಳೆ ರಾಜಮೌಳಿಗೆ ರಮಾ ಪರಿಚಯವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ರಮಾ ಈ ಸೀರಿಯಲ್ ನಿರ್ದೇಶನದ ವೇಳೆ ಪರಿಚಯವಾಗಿದ್ದರು. ರಮಾ ಅವರು ಕಷ್ಟದಲ್ಲಿ ಇದ್ದಾಗ ರಾಜಮೌಳಿ ಅವರ ಬೆಂಬಲಕ್ಕೆ ನಿಂತಿದ್ದರು. ಅವರ ಪ್ರತಿಯೊಂದು ಕಷ್ಟಕ್ಕೂ ಸಾಥ್ ನೀಡಿದ್ದರು. ಆಗಲೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ರಮಾ ಅವರಿಗೂ ರಾಜಮೌಳಿ ಇಷ್ಟ ಆಗಿದ್ದರೂ ಹಿಂದಿನ ಕಹಿ ಘಟನೆಯಿಂದ ಹಿಂದೇಟು ಹಾಕಿದ್ದರು. ಬಳಿಕ ಒಪ್ಪಿ ಮದುವೆ ಆಗಿದ್ದರು. ಇದು ಎಲ್ಲರಿಗೂ ಗೊತ್ತಿರುವ ವರ್ಷನ್. ಆದ್ರೀಗ ರಾಜಮೌಳಿ ಹಾಗೂ ರಮಾ ಮಧ್ಯೆ ಶ್ರೀನಿವಾಸ ರಾವ್ ಎಂಟ್ರಿಯಾಗಿದೆ. ಇವರೇ ವಿಡಿಯೋದಲ್ಲಿ ಹೇಳಿಕೊಂಡಂತೆ " ನಮ್ಮಿಬ್ಬರ ಮಧ್ಯೆ ಒಬ್ಬ ಮಹಿಳೆ ಬರಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ನಮ್ಮದೊಂದು ತರ ತ್ರಿಕೋನ ಪ್ರೇಮಕಥೆ" ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net