ನನ್ನ ಜೀವವಿರುವವರೆಗೂ ಬಿಜೆಪಿ ಬಿಟ್ಟು ಹೋಗುವುದಿಲ್ಲ: ರಾಜಾ ಸಿಂಗ್​

Untitled design (35)
Published on

ನವದೆಹಲಿ: ಅಮಾನತುಗೊಂಡ ಬಿಜೆಪಿ ಶಾಸಕ ರಾಜಾ ಸಿಂಗ್, "ಭಾರತೀಯ ಜನತಾ ಪಕ್ಷ ನನ್ನ ನರ-ನಾಡಿಗಳಲ್ಲಿ ಹರಿದಾಡುತ್ತಿದೆ. ನನ್ನ ಜೀವ ಇರುವವರೆಗೂ ಬಿಜೆಪಿ ಬಿಟ್ಟು ಬೇರೆ ಪಕ್ಷವನ್ನು ಸೇರುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ಅವರನ್ನು ಭೇಟಿಯಾದ ಬೆನ್ನಲ್ಲೇ ರಾಜಾ ಸಿಂಗ್ ಭಾರತೀಯ ರಾಷ್ಟ್ರ ಸಮಿತಿಗೆ (BRS) ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳು ಹರಿದಾಡಿತು. ಈ ಊಹಾಪೋಹಗಳ ವಿರುದ್ಧ ಸಿಡಿದೆದ್ದ ಸಿಂಗ್, "ನನ್ನನ್ನು ಪಕ್ಷ ಅಮಾನತುಗೊಳಿಸಿದೆ. ಶೀಘ್ರವೇ ಇದನ್ನು ಹಿಂತೆಗೆದುಕೊಳ್ಳದಿದ್ದರೆ ಬಹುಶಃ ನಾನು ರಾಜಕೀಯದಿಂದ ವಿರಾಮ ತೆಗೆದುಕೊಳ್ಳುತ್ತೇನೆ ಹೊರತು ಬಿಜೆಪಿಯನ್ನು ತ್ಯಜಿಸುವುದಿಲ್ಲ" ಎಂದು ಹೇಳಿದರು.

"ನಾನು ಮಾಧ್ಯಮಗಳಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಬಿಜೆಪಿ ನನ್ನ ನರ-ನಾಡಿಗಳಲ್ಲಿ ಹರಿದಾಡುತ್ತಿದೆ. ನನ್ನ ಕೊನೆಯುಸಿರಿನ ತನಕ ನಾನು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಹಿಂದೂ ರಾಷ್ಟ್ರದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ" ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದರು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net