ಬಾಲ್ಯ ವಿವಾಹ ತಡೆಗೆ ಗ್ರಾಪಂಗಳಲ್ಲಿ ಅರಿವು ಮೂಡಿಸಿ

sor awareness
ಸೊರಬದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಬಿಇಒ ಆರ್.ಪುಷ್ಪಾ ಮಾತನಾಡಿದರು. ಪ್ರಭು ಮೇಸಿ, ರಂಜಿನಿ, ಎಂ.ಡಿ.ಉಮೇಶ್, ಪರಶುರಾಮ್ ಇತರರಿದ್ದರು.
Published on

ಸೊರಬ: ಬಾಲ್ಯ ವಿವಾಹ ತಡೆಗೆ ಕಾನೂನು, ಕಾಯ್ದೆಗಳಿದ್ದು, ಸಾಕಷ್ಟು ಜಾಗೃತಿ ಮೂಡಿಸಿದರೂ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರದ ಮಾರ್ಗಸೂಚಿಯಂತೆ ಜನರನ್ನು ಇನ್ನಷ್ಟು ಜಾಗೃಗೊಳಿಸಲು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ, ಪುರಸಭೆಯಿಂದ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ದೈಹಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ‘ಮಿಷನ್ ಸುರಕ್ಷಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ, ಬಾಲ ಗರ್ಭಿಣಿ ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಗಳು ಹೆಚ್ಚುತ್ತಿವೆ. ಅವುಗಳನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನೇತ್ರಾವತಿ ಮಾತನಾಡಿ, ಪ್ರತಿ ದಿನ ಶಾಲೆಯ ಆರಂಭದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಪ್ರಮಾಣ ವಚನ ಬೋಧಿಸಬೇಕು. ಕಾವಲು ಸಮಿತಿ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಕರೆಯಬೇಕು. ವಲಸೆ ಹೋಗಿರುವ ಹೆಣ್ಣು ಮಕ್ಕಳು ಯಾವ ಜಾಗಕ್ಕೆ ಹೋಗಿದ್ದಾರೆ ಎಂಬ ವಿವರ ಪಡೆಯಬೇಕು, ವಸತಿ ನಿಲಯದಿಂದ ಮನೆಗೆ, ಜಾತ್ರೆಗೆ, ಹಬ್ಬ ಆಚರಣೆ ಹೋದವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಪ್ರಭು ಮೇಸಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವ ಸಲುವಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದರು.

ಪುರಸಭೆ ಉಪಾಧ್ಯಕ್ಷೆ ರಂಜಿನಿ, ಸದಸ್ಯ ಎಂ.ಡಿ.ಉಮೇಶ್, ನಾಮ ನಿರ್ದೇಶಿತ ಸದಸ್ಯ ಪರಶುರಾಮ್, ಮುಖ್ಯಾಧಿಕಾರಿ ಚಂದನ್, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ದಯಾನಂದ ಕಲ್ಲೇರ, ನಿಲಯ ಮೇಲ್ವಿಚಾರಕಿ ಶೀಲಾ, ಶಿವಣ್ಣ, ದಾನಪ್ಪ, ಸುಜಾತಾ, ಆರೋಗ್ಯ ಇಲಾಖೆಯ ಶಬ್ಬೀರ್ ಖಾನ್, ಪುರಸಭೆಯ ಜಯಶ್ರೀ, ಲಾಜರ್, ಲಕ್ಷ್ಮೀನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net