ಶಾಶ್ವತ ನೀರಾವರಿ ಯೋಜನೆ ಪರ ಧ್ವನಿ ಎತ್ತಿ

niravani protest,webp
ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀವಾರಿ ಯೋಜನೆ ಜಾರಿಗೊಳಿಸಲು ಜನಪ್ರತಿನಿಽಗಳು ಸದನದಲ್ಲಿ ಧ್ವನಿಎತ್ತಬೇಕು ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ವೇದಿಕೆ ಸದಸ್ಯರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀವಾರಿ ಯೋಜನೆ ಜಾರಿಗೊಳಿಸಲು ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ವೇದಿಕೆ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ನೀರಾವರಿ ಹೋರಾಟಗಾರರು, ಪ್ರಗತಿಪರ ಸಂಘಟನೆಗಳು, ಯುವ ಶಕ್ತಿ ಮುಖಂಡರು ಜನಪ್ರತಿನಿಧಿಗಳ ಭಾವಚಿತ್ರ ಹಿಡಿದು ರಸ್ತೆ ತಡೆದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ಸಂಚಾಲಕ ಆಂಜನೇಯರೆಡ್ಡಿ ಮಾತನಾಡಿ, ನಮ್ಮನಾಳುವ ಸರ್ಕಾರಗಳು ಮತ್ತು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದು ಶಾಶ್ವತ ನೀರಾವರಿ ತರಲು ವಿಫಲರಾಗಿದ್ದಾರೆ. ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 40 ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಟಗಳು ನಡೆಯುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಆಳಿದ ಎಲ್ಲ ಸರ್ಕಾರಗಳು ೨೩ ವರ್ಷಗಳಲ್ಲಿ ನೀರು ಹರಿಸುವ ಭರವಸೆ ಕೊಟ್ಟರೇ ಸಹ ಬೇಡಿಕೆ ಈಡೇರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
5,400 ಕೆರೆಗಳಿದ್ದರೂ ರೈತರಿಗೆ ನೀರಿನ ಭವಣೆ ತಪ್ಪಿಲ್ಲ, ಅಂತರ್ಜಲ ಪಾತಾಳಕ್ಕೆ ಸೇರಿದ್ದು, 1800 ಅಡಿ ಕೊಳವೆ ಬಾವಿ ಕೊರೆಯಿಸಿ ಲಕ್ಷಾಂತರ ರೂಪಾಯಿ ರೈತರ ಬೆವರಿನ ಹಣ ನೀರು ಪಾಲಾಗುತ್ತಿದೆ. ಆಳದ ಕೊಳವೆ ಬಾವಿಗಳಿಂದ ಸಿಗುತ್ತಿರುವ ನೀರಿರು ಫ್ಲೋರೈಡ್ ನೈಟ್ರ‍್ತ್ಯೆÊಡ್‌ನಿಂದ ಕೂಡಿದ್ದು ಈ ನೀರನ್ನು ಕುಡಿದ ನಾಗರೀಕರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ ಇತ್ತಿಚಿಗೆ ಇದೇ ಕುಡಿಯುವ ನೀರಿನ ಕೊಳವೆ ಭಾವಿಗಳಲ್ಲಿ ಅಪಾಯಕಾರಿ ಯೂರೆನಿಯಂ ಅಂಶಗಳು ಪತ್ತೆಯಾಗಿದ್ದು, ಮುಂದಿನ ನಾಗರಿಕರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆಗಳಿಗೆ ಜೋತು ಬಿದ್ದು ಸಮಗ್ರವಾದ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ಮರೆತೆ ಹೋಗಿದ್ದಾರೆ. ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯವರೆಗೂ ಆಂಧ್ರದ ಕೃಷ್ಣಾ ನದಿ ನೀರು ಹರಿದು ಬಂದಿದ್ದು, ನಮ್ಮ ಪಾಲಿನ ನೀರನ್ನು ಯಾಕೆ ಹರಿಸುತ್ತಿಲ್ಲ.? ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕೊಟ್ಟರೆ ಸ್ವಯಂ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ವಲಸೆ ಹೋಗುವುದು ತಪ್ಪುತ್ತದೆ ಎಂದರು.

  • ಎತ್ತಿನಹೊಳೆ ಸರ್ಕಾರದ ಎಟಿಎಂ
    ಎತ್ತಿನ ಹೊಳೆಯಿಂದ ನಮ್ಮ ಭಾಗಕ್ಕೆ ನೀರು ಹರಿಯುವುದಿಲ್ಲ ಎಂದು ಗೊತ್ತಿದ್ದರೂ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಮಾಡುತ್ತಿದ್ದಾರೆ. ಸರ್ಕಾರದ ಪಾಲಿಗೆ ಎತ್ತಿನ ಹೊಳೆ ಎಟಿಎಂ ಯಂತ್ರವಾಗಿದೆ. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧಿಕರಣಕ್ಕೆ ಒಳ ಪಡಿಸದೇ ಇದ್ದರೆ ನಮ್ಮ ಕೆರೆಗಳು ನಾಶವಾಗುವುದರ ಜತೆಗೆ ಅಂರ್ತಜಲವು ವಿಷ ಪೂರಿತವಾಗುತ್ತದೆ. ಹಾಗಾಗಿ ೩ನೇ ಹಂತದ ಶುದ್ಧಿಕರಣ ಕಡ್ಡಾಯವಾಗಿ ಮಾಡಬೇಕು ಎಂದು ಆಂಜನೇಯರೆಡ್ಡಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಚಿನ್ನಪ್ಪರೆಡ್ಡಿ, ಕೋಟಿಗಾನಹಳ್ಳಿ ಗಣೇಶ್‌ಗೌಡ, ಹೊಳಲಿ ಪ್ರಕಾಶ್, ಕೆ.ನಾರಾಯಣಗೌಡ, ಈಕಂಬಳ್ಳಿ ಮಂಜುನಾಥ್, ರಾಮು ಶಿವಣ್ಣ, ಜಿ.ನಾರಾಯಣಸ್ವಾಮಿ, ಚಂಬೆ ರಾಜೇಶ್, ಕನ್ನಡ ಮಿತ್ರ ವೆಂಕಟಪ್ಪ, ಶಾಸ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net