ಬಾಯಾರಿದ ತೋಟಗಳಿಗೆ ದಣಿವಾರಿಸಿದ ಮಳೆರಾಯ

TKE RAIN
ತರೀಕೆರೆ ತಾಲೂಕು ಹಾದಿಕೆರೆಯಲ್ಲಿ ಸುರಿದ ಮಳೆಗೆ ಜಮೀನಿನಲ್ಲಿ ನೀರು ನಿಂತಿರುವುದು.
Published on

ಬೆಂಗಳೂರು:
ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ, ಬಾಯಾರಿದ್ದ ತೆಂಗಿನ ತೋಟ ಮತ್ತು ಅಡಿಕೆ ತೋಟಗಳು ನಳನಳಿಸುತ್ತಿವೆ.
ಬಿಸಿಲಿನ ಬೇಗೆಗೆ ಒಣಗುತ್ತಿದ್ದ ತೋಟ ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇದ್ದ ಬೋರ್‌ವೆಲ್ ಗಳು ಬತ್ತಿ ಹೋಗಿದ್ದರಿಂದ ಸಾಲ ಸೂಲ ಮಾಡಿ ಹೊಸ ಬೋರ್ ವೆಲ್ ಕೊರೆಸಲು ಮುಂದಾಗಿದ್ದರು. ತೋಟ ಉಳಿಸಿಕೊಳ್ಳಲು ವಿದ್ಯುತ್ ಕಣ್ಣಾ ಮುಚ್ಚಾಲೆ ನಡುವೆಯೂ ಬೋರ್‌ವೆಲ್ ಮೂಲಕ ನೀರು ಹಾಯಿಸಲು ರೈತರು ಹರಸಾಹಸ ನಡೆಸಿದ್ದರು.
ಕಳೆದ ಒಂದು ವಾರದಲ್ಲಿ ಬಿದ್ದ ಮಳೆಯಿಂದಾಗಿ ಭೂಮಿ ಹದವಾಗಿದ್ದು, ಸದ್ಯಕ್ಕೆ ನೀರಿನ ಚಿಂತೆ ರೈತರಿಗೆ ಇಲ್ಲದಂತ ವಾತಾವರಣ ನಿರ್ಮಾಣವಾಗಿದೆ. ಬೋರ್ ವೆಲ್ ಕೊರೆಸಲು ಬಂಡವಾಳ ಹಾಕುವ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ರೈತ ಸಮುದಾಯ ನಿಟ್ಟುಸಿರು ಬಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net