ಧಾರಾಕಾರ ಮಳೆಗೆ ಗ್ರಾಮಗಳು ಜಲಾವೃತ, ರಾಜ್ಯದಲ್ಲಿ ನೆರೆ ಭೀತಿ

rain in bagalakote
Published on

ಬಾಗಲಕೋಟೆ: ಪ್ರವಾಹ ಎಂಬ ಶಬ್ದ ಕೇಳಿದ್ರೆ ಸಾಕು ಈ ಭಾಗದ ಜನರಲ್ಲಿ ಆತಂಕ ಮನೆ ಮಾಡುತ್ತೆ. ಕಳೆದ ವರ್ಷ ಕೃಷ್ಣಾ ಪ್ರವಾಹ ತೊಂದೊಡ್ಡಿದ ಸಮಸ್ಯೆಗಳು ಇನ್ನೂ ಹಸಿಯಾಗೇ ಇವೆ. ಈ ನಡುವೆ ಮತ್ತೊಮ್ಮೆ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಜಮಖಂಡಿ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಕೆಲ ಗ್ರಾಮಗಳು ನಲುಗಿವೆ. ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮದಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ಗ್ರಾಮಸ್ಥರು ನಿದ್ರೆ ಮಾಡದೆ ನಡುನೀರಲ್ಲಿ ನಿಂತು ಜಾಗರಣೆ ಮಾಡುವಂತಾಯಿತು. ಶೂರ್ಪಾಲಿ ಗ್ರಾಮದ ತೋಟದ ಮನೆಗಳು, ಪುನರ್ ವಸತಿ ಕೇಂದ್ರ ಸಮೀಪದ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ಮನೆಗಳು ಜಲಾವೃತಗೊಂಡು ನೆರೆ ಭೀತಿ ಸೃಷ್ಟಿಯಾಗಿತ್ತು. ಇದನ್ನೂ ಓದಿರಿ ಸಿಎಂ ಕಚೇರಿ-ನಿವಾಸದಲ್ಲಿ 10 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ

ಮೊಣಕಾಲೆತ್ತರದ ವರೆಗೂ ಮನೆ ಸುತ್ತ ಮಳೆ ನೀರು ನಿಂತಿದೆ. ಇನ್ನು ಹೊಲಗಳು ಕೆರೆಯಂತೆ ಭಾಸವಾಗುತ್ತಿದೆ. ವರುಣನ ಅಬ್ಬರಕ್ಕೆ ಬೆಳೆಗಳು ಜಲಾವೃತವಾಗಿವೆ. ತುಬಚಿ, ಬಾಡಗಿ ಕ್ರಾಸ್

ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕುವಲ್ಲಿ ಜನರು ಹೈರಾಣಾಗಿದ್ದಾರೆ.

ಕಳೆದ ವರ್ಷದ ನೆರೆ ಸಂಕಷ್ಟ ಮಾಸುವ ಮುನ್ನವೇ ಈಗ ಮತ್ತೆ ಮನೆ, ಬೆಳೆ ಜಲಾವೃತವಾಗಿದ್ದು ಜನರಲ್ಲಿ ಆತಂಕ ತಂದಿದೆ.

ಬೆಳಗಾವಿಯಲ್ಲೂ ನಾಲ್ಕೆದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ 4.57 ಲಕ್ಷ ಹೆಕ್ಟೇರ್​ ಪ್ರದೇಶದ ಬೆಳೆ ಜಲಾವೃತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net