ಮದುವೆಗೆ ಮಳೆ ತಂದ ಅಡ್ಡಿ: ಒಂದೇ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿಂದು, ಮುಸ್ಲಿಂ ಜೋಡಿ | Weddings

Weddings
Published on

Hindu-Muslim Weddings : ಒಂದೇ ಮದುವೆ ಮಂಟಪದಲ್ಲಿ ಹಿಂದು, ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಪುಣೆಯ ವನವಾಡಿಯಲ್ಲಿ ಮಂಗಳವಾರ (ಮೇ.20) ನಡೆದಿದೆ.

ಧಾರ್ಮಿಕ ಏಕತೆ ಮತ್ತು ಸಹಾನುಭೂತಿಯ ಸಂದೇಶವನ್ನು ಸಮಾಜಕ್ಕೆ ನೀಡುವ ರೀತಿ ಒಂದೇ ವೇದಿಕೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹಿಂದು ಮತ್ತು ಮುಸ್ಲಿಂ ನವ ವಧುವವರು.

ಪುಣೆಯ ವನವಾಡಿಯ ರಾಜ್ಯ ಮೀಸಲು ಪೊಲೀಸ್‌ ಪಡೆ ಮೈದಾನದ ಬಳಿಯ ಅಲಂಕಾರನ್‌ ಲಾನ್ಸ್‌ನಲ್ಲಿ ಮಂಗಳವಾರ ಸಂಕೃತಿ ಕವಾಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹವು ಸಂಜೆ 6.56ಕ್ಕೆ ನಿಗದಿಯಾಗಿತ್ತು. ಅದರಂತೆ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ಈ ವೇಳೆ ಅತಿಥಿಗಳು ಆಶ್ರಯಕ್ಕಾಗಿ ಪರದಾಡುವಂತಾಯಿತು. ಕಾರ್ಯಕ್ರಮ ಸ್ಥಗಿತಗೊಂಡಿತು.

ಪಕ್ಕದಲ್ಲಿ ಸಭಾಂಗಣವೊಂದರಲ್ಲಿನಿವೃತ್ತ ಪೊಲೀಸ್ ಅಧಿಕಾರಿ ಫಾರೂಕ್ ಕಾಝಿಯವರ ಪುತ್ರ ಮೊಕ್ಸಿನ್ ಮತ್ತು ಅವರ ವಧು ಮಾಹೀನ್ ಅವರ ವಿವಾಹ ಆಚರಣೆಯ ಭಾಗವಾದ 'ವಲಿಮಾ' ಕಾರ್ಯಕ್ರಮ ನಡೆಯುತ್ತಿತ್ತು.

15 ನಿಮಿಷಗಳಲ್ಲಿ ಮಳೆ ನಿಲ್ಲುತ್ತದೆ ಎಂದು ನಾವು ಭಾವಿಸಿದ್ದೆವು, ಆದರೆ ಮಳೆ ಮುಂದುವರಿದಿತ್ತು. ಅತಿಥಿಗಳು ಆಶ್ರಯಕ್ಕಾಗಿ ಎಲ್ಲಾ ದಿಕ್ಕುಗಳಲ್ಲಿಯೂ ಓಡುತ್ತಿದ್ದಂತೆ ಪಕ್ಕದಲ್ಲಿ ಸಭಾಂಗಣವಿರುವುದನ್ನು ನಾವು ಗಮನಿಸಿ ಅಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ನಂತರ ಅವರನ್ನು ಸಂಪರ್ಕಿಸಿ, 'ಸಪ್ತಪದಿ'ಯನ್ನು ಒಳಾಂಗಣದಲ್ಲಿ ಮಾಡಲು ಅನುಮತಿ ಪಡೆದರು.ಅವರು ತಕ್ಷಣ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿ ಮುಸ್ಲಿಂ ಕುಟುಂಬದವರು ಇವರ ಮದುವೆಗಾಗಿ ವೇದಿಕೆಯನ್ನು ಖಾಲಿ ಮಾಡಿ, ಹಿಂದು ಸಂಪ್ರದಾಯದಂತೆ ಮದುವೆ ಆಗಲು ಸಹಕರಿಸಿದರು.

ಪರಸ್ಪರ ಸಂಪ್ರದಾಯಗಳಿಗೆ ಸಂಪೂರ್ಣ ಗೌರವದೊಂದಿಗೆ ಎರಡೂ ಆಚರಣೆಗಳನ್ನು ಒಂದರ ನಂತರ ಒಂದರಂತೆ ನಡೆಸಲಾಯಿತು ಎಂದು ನೀಲೇಶ್ ಶಿಂಧೆ ಎಂಬವರು ಹೇಳಿದರು.

'ನಾವು ಈ ಮದುವೆ ಕಾರ್ಯಕ್ರಮಕ್ಕೆ ಎರಡು ತಿಂಗಳಿನಿಂದ ತಯಾರಿ ನಡೆಸುತ್ತಿದ್ದೆವು. ನಾವು ಅದ್ಧೂರಿಯಾಗಿ ಆಚರಿಸಲು ಬಯಸಿದ್ದೆವು. ಆದರೆ ಇದು ದೇವರ ಇಚ್ಛೆಯಾಗಿತ್ತು ಮತ್ತು ನಮಗೆ ಅವಕಾಶ ನೀಡಿದ್ದಕ್ಕೆ ಕಾಝಿ ಕುಟುಂಬಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ವಧು ಸಂಕೃತಿಯ ಅಜ್ಜ ಸಂತರಾಮ್ ಕವಾಡೆ ಹೇಳಿದರು.

ವಧುವಿನ ತಂದೆ ಚೇತನ್ ಕವಾಡೆ ಇದೇ ಭಾವನೆಯನ್ನು ವ್ಯಕ್ತಪಡಿಸಿ, ಅವ್ಯವಸ್ಥೆಯ ಸಮಯದಲ್ಲಿ ಕಾಝಿ ಕುಟುಂಬವು ನಮ್ಮ ಮಗಳ ಮಹತ್ವದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಲು ಹಿಂಜರಿಯಲಿಲ್ಲ. ವಿಭಿನ್ನ ಜಾತಿ ಮತ್ತು ಧರ್ಮಗಳ ಇಬ್ಬರು ಜೋಡಿಗಳು ಒಂದೇ ವೇದಿಕೆಯಲ್ಲಿ ವಿವಾಹವಾದರು. ಇದು ಸಾಮರಸ್ಯದ ಸುಂದರ ಕ್ಷಣ. ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net