

Friends: ನಾವು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವೈರಲ್ ವಿಡಿಯೋಗಳನ್ನು ನೋಡುತ್ತೇವೆ. ಚಿರತೆಗೆ ಮಹಿಳೆ ಮುತ್ತಿಡುವುದು, ಕತ್ತೆಯ ಮೇಲೆ ಯುವಕನು ಸವಾರಿ ಮಾಡುವುದು, ಮುಗ್ದ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಪ್ರೀತಿ ಇಂತಹ ವೈರಲ್ ವಿಡಿಯೋಗಳು ಈಗ ಸಾಮಾನ್ಯವಾಗಿದೆ. ಆದ್ರೆ ಇದೀಗ ವೈರಲ್ ಆಗಿರುವ ವಿಡಿಯೋ ಏನು ಅಂದ್ರೆ ಒಬ್ಬ ಪುಟ್ಟ ಬಾಲಕಿ ಬೀದಿ ನಾಯಿಗಳ ಗುಂಪಿನ ಜೊತೆ ಯಾವುದೇ ಹೆದರಿಕೆ ಇಲ್ಲದೆ ಒಂದು ನಾಯಿಯ ಮೇಲೆ ಕುಳಿತು ಸವಾರಿ ಮಾಡಿ ರಸ್ತೆ ದಾಟಿದ ವಿಡಿಯೋ ಸಖತ್ ವೈರಲ್ ಆಗಿದೆ.
ಪುಟ್ಟ ಬಾಲಕಿ ಹಾಗೂ ಬೀದಿ ನಾಯಿಗಳ ನಿಶ್ಕಲ್ಮಶ ಪ್ರೀತಿಯನ್ನು ಇಲ್ಲಿ ನೋಡಬಹುದು. ತನ್ನ ಕುಟುಂಬದವರ ರೀತಿಯಲ್ಲಿಯೇ ಅವುಗಳ ಜೊತೆ ರಸ್ತೆ ದಾಟುತ್ತಿದ್ದಾಳೆ. ಅದರಲ್ಲಿ ತನ್ನ ಭವ್ಯ ಕುದುರೆಯಾಗಿಟ್ಟುಕೊಂಡ ಒಂದು ಬೀದಿ ನಾಯಿಯ ಮೇಲೆ ಕುಳಿತು ಸವಾರಿ ಮಾಡಿ ಅವರ ಬಾಂಧವ್ಯವನ್ನು ತೋರ್ಪಡಿಸಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆರೋಗ್ಯವಂತ ಬೀದಿ ನಾಯಿಯ ಮೇಲೆ ಶಾಂತವಾಗಿ ಸವಾರಿ ಮಾಡುವ ಪುಟ್ಟ ಹುಡುಗಿ, ರಕ್ಷಣಾತ್ಮಕ ತಂಡದಂತೆ ಅವಳ ಪಕ್ಕದಲ್ಲಿ ನಡೆಯುವ ಇತರ ನಾಯಿಗಳೊಂದಿಗೆ ಸೇರಿಕೊಂಡಳು.
ವಿಡಿಯೋದಲ್ಲಿ ನಗರದ ಬೀದಿಯಲ್ಲಿ ಹುಡುಗಿಯ ಪಕ್ಕದಲ್ಲಿ ನಾಯಿಗಳ ಗುಂಪೊಂದು ನಡೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಜೊತೆಗೆ ಆಕೆ ಒಂದು ನಾಯಿಯನ್ನೇರಿ ಸವಾರಿ ಮಾಡಿದ್ದನ್ನು ನೊಡಿ ಎಂದು ವೀಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ. ಕುದುರೆಯಂತೆ ಆತ್ಮವಿಶ್ವಾಸದಿಂದ ಪ್ರಾಣಿಗಳ ಮೇಲೆ ಕುಳಿತು, ಹುಡುಗಿ ರಾಜಮನೆತನದವರಂತೆ ಬೀದಿಗಳಲ್ಲಿ ಹೋಗುವ ರೀತಿಯಲ್ಲಿ ಆ ಪುಟ್ಟ ಬಾಲಕಿ ಯಾವುದೇ ಭಯವಿಲ್ಲದೆ ಸಾಗಿದ್ದಾಳೆ.(ಏಜೆನ್ಸೀಸ್)