

Jet: ಸಾಮಾನ್ಯವಾಗಿ ಭಾರತದಲ್ಲಿ ಹೊಸದಾಗಿ ವಸ್ತುಗಳನ್ನು ಪರಿಚಯಿಸಿದಾಗ ಹಾಗೂ ಬೈಕ್, ಕಾರು, ಟ್ಯ್ರಾಕ್ಟರ್, ಲಾರಿ ಸೇರಿದಂತೆ ಹೊಸ ವಾಹನಗಳು ಖರೀದಿಸಿದಾಗ ಪೂಜೆ ಮಾಡಿಸುವ ಸಂಪ್ರದಾಯವಿದೆ. ಇದೀಗ ಬೆಂಗಳೂರಿಗರೊಬ್ಬರು 200 ಕೋಟಿ ರೂ. ಕೊಟ್ಟು ಖರೀದಿಸಿದ ಖಾಸಗಿ ಜೆಟ್ ವಿಮಾನಕ್ಕೆ ಭರ್ಜರಿ ಪೂಜೆ ಮಾಡಿಸಿದ್ದಾರೆ. ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಪಂಡಿತರೊಬ್ಬರು ಐಷಾರಾಮಿ ಖಾಸಗಿ ಜೆಟ್ ಅನ್ನು ಪೂಜಿಸುತ್ತಿರುವುದನ್ನು ಕಾಣಬಹುದು. ಪೂಜೆ ಮಾಡುವ ಅರ್ಚಕರು ಸಾಮಾನ್ಯ ಪುರೋಹಿತರಲ್ಲ, ಹೌದು, ಅಂಬಾನಿ ಕುಟುಂಬ ಸೇರಿದಂತೆ ದೇಶದ ಐಷಾರಾಮಿ ಕುಟುಂಬಗಳಿಗೆ ಪೂಜೆ ನಡೆಸಿಕೊಡುವ ಅರ್ಜಕ ಪಂಡಿತ್ ಚಂದ್ರಶೇಖರ್ ಶರ್ಮ. ಈ ಜೆಟ್ ವಿಮಾನಕ್ಕೆ ಪೂಜೆ ಮಾಡುವ ಮೂಲಕ ಎಲ್ಲರನ್ನು ಇದೀಗ ಅಚ್ಚರಿಗೊಳಿಸಿದ್ದಾರೆ.
ವಿಡಿಯೋದಲ್ಲಿದೇನಿದೆ...?
ಈ ವಿಡಿಯೋವನ್ನು ಸ್ವತ ಪಂಡಿತ್ ಚಂದ್ರಶೇಖರ್ ಶರ್ಮ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶರ್ಮ ಅವರು, 200 ಕೋಟಿ ರೂ. ಮೌಲ್ಯದ ಬಿಳಿ ಗಲ್ಫ್ಸ್ಟ್ರೀಮ್ G280 ಜೆಟ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮತ್ತು ಈ ಜೆಟ್ ಅನ್ನು ಪೂರ್ಣ ವಿಧಿಗಳು ಮತ್ತು ಸಮಾರಂಭಗಳೊಂದಿಗೆ ಪೂಜಿಸಲಾಗುತ್ತದೆ. ವಿಮಾನದ ಹೊರಗೆ ಮಾತ್ರವಲ್ಲದೆ, ಅದರ ಒಳಗೆ ಕೂಡ ಪೂಜೆ ಸಲ್ಲಿಸಿದರು. ಒಳಗೆ ಹೋದ ನಂತರ, ಗಣೇಶ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ..
ಇದನ್ನೂ ಓದಿ:ಸಾಲು ಸಾಲು ಸವಾಲುಗಳು… 47 ವರ್ಷದ ವಿಶಾಲ್ ತಡವಾಗಿ ಮದುವೆಯಾಗಲು ಇದೇ ಕಾರಣವಂತೆ! Actor Vishal ಖಾಸಗಿ ಜೆಟ್ ಯಾರದ್ದು..? ಪೂಜೆ ಮುಗಿದ ನಂತರ ಜೆಟ್ ಮಾಲೀಕ ಅರ್ಜಜಕರೊಂದಿಗೆ ಸೆಲ್ಫಿ ತಗೆಸಿಕೊಂಡಿದ್ದರು. ಈ ಜೆಟ್ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಲೀಕ ಜೀತು ವರ್ವಾನಿ ಎಂಬ ಉದ್ಯಮಿಯದ್ದಾಗಿದೆ ಎಂದು ಹೇಳಲಾಗುತ್ತದೆ. ಜೀತು ಎಂಬಸಿ ಗ್ರೂಪ್ನ ಕಾರ್ಯನಿರ್ವಾಹಕೆತರ ಅಧ್ಯಕ್ಷರಾಗಿದ್ದಾರೆ.
ಚಂದ್ರಶೇಖರ್ ಶರ್ಮಾ ಯಾರು?
ಪಂಡಿತ್ ಚಂದ್ರಶೇಖರ ಶರ್ಮ ಅವರ ಬಗ್ಗೆ ಹೇಳುವುದಾದರೆ, ಅವರು ಭಾರತದ ಪ್ರಸಿದ್ದ ಜ್ಯೋತಿಷಿ ಮತ್ತು ವೇದ ಪಂಡಿತರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಅಂಬಾನಿ ಕುಟುಂಬದ ಮಗ ಅನಂತ್ ಅಂಬಾನಿಯವರ ಮದುವೆಯಲ್ಲಿ ಪೂಜೆಯನ್ನೂ ಅವರು ನಡೆಸಿದರು. ಅವರು ಆಗಾಗ್ಗೆ ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳಿಗೆ ಖಾಸಗಿ ಪೂಜೆಗಳು ಮತ್ತು ಆಚರಣೆಗಳನ್ನು ಆಯೋಜಿಸುತ್ತಾರೆ.(ಏಜೆನ್ಸೀಸ್)