

ಗುಂಡ್ಲುಪೇಟೆ: ಶುಕ್ರವಾರ ಬಿದ್ದ ಗಾಳಿ ಸಹಿತ ಮಳೆಗೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ಮನೆಯ ಛಾವಣಿ ಹಾರಿ ಹೋಗಿದೆ.
ಶುಕ್ರವಾರ ತಡರಾತ್ರಿಯವರೆಗೂ ಬಿದ್ದ ಗಾಳಿ-ಮಳೆಯಿಂದ ಗ್ರಾಮದ ಮಲ್ಲಪ್ಪ ಹಾಗೂ ಚಿಕ್ಕಬಸಪ್ಪ ಎಂಬುವರ ಮನೆಯ ಛಾವಣಿಯ ಹೆಂಚುಗಳು ಹಾರಿಹೋಗಿವೆ. ಮನೆಯ ಗೋಡೆ ಹಾಗೂ ಕಿಟಕಿಗಳಿಂದ ಮಳೆ ನೀರು ಎರಚಿ ಮನೆಯನ್ನು ಆವರಿಸಿದೆ. ಹೆಂಚುಗಳು ದನಗಳ ಕೊಟ್ಟಿಗೆ ಮೇಲೆ ಬಿದ್ದ ಪರಿಣಾಮ ಶೀಟುಗಳು ಒಡೆದು ಹೋಗಿವೆ. ಮನೆಯಲ್ಲಿ ಜನರು ಇದ್ದರು. ಆದರೆ ಅವಘಡದಿಂದ ಎರಡು ಕುಟುಂಬದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ ಎರಡೂ ಕುಟುಂಬದವರಿಗೂ ಶೀಘ್ರವೇ ಪರಿಹಾರ ಕೊಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಬಸವಣ್ಣ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.