ಚಲಿಸುವ ರೈಲಿನಿಂದ ಕಸ ಎಸೆದ ಸೇವಕನಿಗೆ ಗೇಟ್​ ಪಾಸ್​ ನೀಡಿದ ರೈಲ್ವೇ Moving Train

railway
Published on

ಜೈಪುರ: ಭಾರತೀಯ ರೈಲ್ವೆ ಬೋಗಿ ಸಿಬ್ಬಂದಿಯೊಬ್ಬರು ಚಲಿಸುವ ರೈಲಿನಿಂದ  (Moving Train) ಕಸದ ರಾಶಿಯನ್ನು ಎಸೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ನಂತರ ರೈಲ್ವೆ ವ್ಯವಸ್ಥೆಯೊಳಗಿನ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಪದ್ಧತಿ ಬಗ್ಗೆ ಚರ್ಚೆ ವ್ಯಕ್ತವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್​ ಆದ ಪೋಸ್ಟ್​ನಲ್ಲಿ ಅಭಿಷೇಕ್ ಸಿಂಗ್ ಎಂಬ ಬಳಕೆದಾರರು ದೃಶ್ಯವನ್ನು ಸೆರೆಹಿಡಿದಿದ್ದು, ಸೀಲ್ಡಾ-ಅಜ್ಮೀರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸೇವಕ ಕಸದ ಚೀಲಗಳನ್ನು ಹಳಿಗಳ ಮೇಲೆ ಎಸೆದಿದ್ದಾನೆ. ಈ ವೇಳೆ ಸಿಂಗ್ ಆತನಿಗೆ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸೇವಕ ನಾನು ಅದನ್ನು ಮನೆಗೆ ತೆಗೆದುಕೊಂಡು ಹೋಗಬೇಕೇ? ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಕಾಣುವ ವ್ಯಕ್ತಿ ಭಾರತೀಯ ರೈಲ್ವೆಯ ಉದ್ಯೋಗಿ. ಈತ ಮಾಡುವುದನ್ನು ತಪ್ಪು ಎಂದು ಅವನಿಗೆ ಅರ್ಥ ಮಾಡಿಸಲು ಬಹಳಷ್ಟು ಪ್ರಯತ್ನಿಸಿದೆ. ಆದರೆ, ಅದನ್ನು ಆತ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇಷ್ಟೆಲ್ಲಾ ನಡೆದರೂ, ಆತ ಅದೇ ರೀತಿ ಕೆಲಸವನ್ನು ಮಾಡಲು ಆರಂಭಿಸಿದ್ದನು ಎಂದು ಶೀರ್ಷಿಕೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ರೈಲ್ವೆ

ಈ ಘಟನೆ ಕುರಿತು ಭಾರತೀಯ ರೈಲ್ವೇ ಪ್ರತಿಕ್ರಿಯಿಸಿದ್ದು, ಸಂಜಯ್​ ಸಿಂಗ್​ ಎಂದು ಗುರುತಿಸಲಾದ ಕೆಲಸಗಾರರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಹಾಗೆಯೇ ಆನ್​ಬೋರ್ಡ್​ ಹೌಸ್​ಕೀಪಿಂಗ್​ಗೆ ಕಾರಣವಾದ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ ಎಂದು ವಾಯುವ್ಯ ರೈಲ್ವೆ ತಿಳಿಸಿದೆ.

ಚಲಿಸುವ ರೈಲಿನಿಂದ ರೈಲು ಹಳಿಗೆ ಕಸ ಎಸೆಯುವ ಬಗ್ಗೆ ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮತ್ತು ಗುತ್ತಿಗೆ ಸಿಬ್ಬಂದಿ ಸಂಜಯ್ ಸಿಂಗ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಿದ್ದು, ಗುತ್ತಿಗೆ ಸಂಸ್ಥೆಗೆ ಕಠಿಣ ದಂಡ ವಿಧಿಸಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಆದಾಗ್ಯೂ, ಅಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ತಡೆಗಟ್ಟಲು ನಾಮನಿರ್ದೇಶಿತ ನಿಲ್ದಾಣಗಳಲ್ಲಿ ಮಾತ್ರ ಕಸವನ್ನು ವಿಲೇವಾರಿ ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಶಿಕ್ಷಣ ನೀಡಲು ಮುಂದಾಗಿದ್ದೇವೆ. ಈಗಾದ ಅನಾನುಕೂಲತೆಗೆ ತೀವ್ರ ವಿಷಾದಿಸುತ್ತೇವೆ. ಪ್ರಯಾಣಿಕರ ಸೇವೆಗಳನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ನಾಗರಿಕ ಜವಾಬ್ದಾರಿಯನ್ನು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net