ಬೆಳಿಗ್ಗೆ ಓಟ್ಸ್​ ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನವಿದೆಯಾ..? Oats

oats
Published on

Oats: ಅನೇಕರು ಓಟ್ಸ್​ ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆದರೆ ಇದನ್ನು ಬೆಳಗಿನ ತಿಂಡಿಯಾಗಿ ಇದನ್ನು 30 ದಿನಗಳ ಕಾಲ ಸೇವಿಸುವುದರಿಂದ ಇದು ನಿಮ್ಮ ದೇಹಕ್ಕೆ ಸಕರಾತ್ಮಕ ಬದಲಾವಣೆಯನ್ನು ತರಬಹುದು. ಓಟ್ಸ್‌ನಲ್ಲಿರುವ ಫೈಬರ್, ನಿಧಾನ ಕಾರ್ಬೋಹೈಡ್ರೇಟ್‌ಗಳು ಮತ್ತು ಸಸ್ಯ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿ ಇರುವಂತೆ ಮಾಡುತ್ತದೆ.

30 ದಿನಗಳ ಕಾಲ ಓಟ್ಸ್ ತಿನ್ನುವುದರಿಂದ ಆಗುವ ಬದಲಾವಣೆಗಳೇನು?

* ಜೀರ್ಣಕ್ರಿಯೆಗೆ ಸಹಾಯ

ಓಟ್ಸ್​ನಲ್ಲಿ ಫೈಬರ್​ ಅಂಶ ಹೆಚ್ಚಾಗಿರುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಿ ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿಸುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದನ್ನು ನಿಲ್ಲಿಸುತ್ತದೆ. ತೂಕವೂ ಹೆಚ್ಚಾಗದೆ, ಸದೃಢ ದೇಹವನ್ನು ಹೊಂದುತ್ತೀರಿ.

* ಗ್ಯಾಸ್ಟ್ರಿಕ್​ ಸಮಸ್ಯೆ ದೂರ

ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್​ನಂತಹ ಸಮಸ್ಯೆ ಇದ್ದರೆ ಓಟ್ಸ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿರುವ ಪೋಷಕಾಂಶಗಳು ಕರುಳಿನ ಆರೋಗ್ಯವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೆಯೇ ಹೊಟ್ಟೆಯಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.

* ಬೆಳಗಿನ ಉಪಹಾರವಾಗಿ ಸೇವಿಸಿ

ಯಾವುದೇ ವ್ಯಕ್ತಿಯು ಬೆಳಗಿನ ಉಪಾಹಾರಕ್ಕೆ ಸಕ್ಕರೆ ಅಂಶವಿರುವಂತಹ ಓಟ್ಸ್ ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದು ದೇಹವನ್ನು ದೀರ್ಘಕಾಲದವರೆಗೆ ಚೈತನ್ಯ ಪೂರ್ಣವಾಗಿರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹವು ಸಕ್ರಿಯವಾಗಿರುವಂತೆ ಮಾಡುತ್ತದೆ.

* ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಓಟ್ಸ್​ನಲ್ಲಿರುವ ಬೀಟಾ-ಗ್ಲುಕನ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಓಟ್ಸ್​ ತಿನ್ನುವಂತಹ ಜನರ ಹೃದಯವು ಆದಷ್ಟು ಆರೋಗ್ಯವಾಗಿರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಸತತ 30 ದಿನಗಳ ಕಾಲ ಉಪಹಾರವಾಗಿ ಓಟ್ಸ್​ ಸೇವಿಸುವುದರಿಂದ ಇದು ದೇಹದಲ್ಲಿ ಅನೇಕ ಸಕರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತದೆ. ಹಾಗೆಯೇ ಹೆಚ್ಚುವರಿ ಓಟ್ಸ್​ ಬಳಸುವ ಬದಲಿಗೆ ಅರ್ಧ ಕಪ್​ ಓಟ್ಸ್ ಬಳಸಿ ಇದು ನಿಮ್ಮ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ತರುವುದರ ಜೊತೆಗೆ ಚೈತನ್ಯದ ಹೊಳಪನ್ನು ನೀಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net