ಕರೊನಾಗೆ ಬಲಿಯಾದ ನೌಕರರ ಕುಟುಂಬ ಸದಸ್ಯರಿಗೆ ರೈಲ್ವೇ ಉದ್ಯೋಗ

railway
Published on

ನವದೆಹಲಿ: ಕರೊನಾದಿಂದ ಸಾವಪ್ಪಿದ ತನ್ನ ನೌಕರರ ಕುಟುಂಬ ಸದಸ್ಯರಿಗೆ ಭಾರತೀಯ ರೈಲ್ವೇ ಸಹಾನುಭೂತಿಯ ಆಧಾರದ ಮೇಲೆ ಉದ್ಯೋಗ ನೀಡುತ್ತಿದೆ. ಈವರೆಗೆ 2,800 ಜನರಿಗೆ ಈ ರೀತಿಯಾಗಿ ಉದ್ಯೋಗ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಮಾರ್ಚ್ 2020 ರಿಂದ ಕರ್ತವ್ಯನಿರತರಾಗಿದ್ದ 3,256 ರೈಲ್ವೇ ನೌಕಕರು ಕರೊನಾಗೆ ಬಲಿಯಾಗಿದ್ದಾರೆ. ಇವರಲ್ಲಿ 2,800 ಜನ ಮೃತರ ಕುಟುಂಬಗಳ ಅರ್ಹ ಸದಸ್ಯರಿಗೆ ಸೂಕ್ತ ಸ್ಥಾನಗಳಲ್ಲಿ ಉದ್ಯೋಗ ನೀಡಲಾಗಿದೆ. ಉಳಿದ ಮೃತ ನೌಕರರ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ 18 ವರ್ಷ ತುಂಬಿದಂತೆ ಉದ್ಯೋಗ ನೀಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net