ರೈಲ್ವೆ ಟಿಕೆಟ್ ಏಜೆಂಟ್ ಅನುಮತಿ ರದ್ದು?

Nation 2 Piyush goyal
Piyush goyal
Published on

ನವದೆಹಲಿ: ರೈಲು ಟಿಕೆಟ್ ಮುಂಗಡ ಕಾದಿರಿಸುವಿಕೆಯಲ್ಲಿ ಖಾಸಗಿ ಏಜೆಂಟರ ಪಾತ್ರ ತೆಗೆದುಹಾಕಲು ಸರ್ಕಾರ ಯೋಚಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದರು.

ಪ್ರತಿಯೊಂದು ಮನೆಯಲ್ಲೂ ಸ್ಮಾರ್ಟ್​ಫೋನ್ ಇರುವುದರಿಂದ ಆನ್​ಲೈನ್ ಮೂಲಕ ಸುಲಭವಾಗಿ ಟಿಕೆಟ್ ಕಾದಿರಿಸಬಹುದಾಗಿದೆ. ಐಆರ್​ಸಿಟಿಸಿ ಆಪ್ ಬಳಸುವ ಮೂಲಕ ರೈಲ್ವೆ ಟಿಕೆಟ್​ಗಳನ್ನು ಕಾದಿರಿಸಬಹುದು. ಹೀಗಾಗಿ ಖಾಸಗಿ ಏಜೆಂಟರು ಮತ್ತು ವೆಂಡರ್​ಗಳನ್ನು ಸೇವೆಯನ್ನು ಕೈಬಿಡಲು ನಿರ್ಧಾರಿಸಲಾಗಿದೆ ಎಂದು ಗೋಯಲ್ ಹೇಳಿದರು.

ವಿವಾದ್ ಸೆ ವಿಶ್ವಾಸ್ ಮಸೂದೆಗೆ ಸಂಸತ್ ಅಸ್ತು: ಬಾಕಿಯಿರುವ ತೆರಿಗೆಯನ್ನು ಮಾರ್ಚ್ 31ರೊಳಗೆ ಪಾವತಿ ಮಾಡಿ ಬಡ್ಡಿ ಹಾಗೂ ದಂಡದಿಂದ ತೆರಿಗೆದಾರರನ್ನು ಪಾರು ಮಾಡಲು ಅವಕಾಶ ಕೊಡುವ ‘ವಿವಾದ್ ಸೆ ವಿಶ್ವಾಸ್’ ಮಸೂದೆಗೆ ರಾಜ್ಯಸಭೆ ಶುಕ್ರವಾರ ಅನುಮೋದನೆ ನೀಡಿದೆ.

  • ನರೇಗಾಕ್ಕೆ 2017-2020ರಲ್ಲಿ -ಠಿ; 1.83 ಲಕ್ಷ ಕೋಟಿ ವ್ಯಯ ಲೋಕಸಭೆಗೆ ಮಾಹಿತಿ.
  • ಎನ್​ಆರ್​ಐಗಳು ಮದುವೆಯಾದ 30 ದಿನದೊಳಗೆ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡುವ ಮಸೂದೆಗೆ ಸಂಸತ್​ನ ಸ್ಥಾಯಿ ಸಮಿತಿ ಅನುಮೋದನೆ.
  • ಕಬ್ಬು ಬೆಳೆಗಾರರಿಗೆ 2018-19 ರಲ್ಲಿ -ಠಿ; 28,222 ಕೋಟಿ ಬಾಕಿಯಿದ್ದ ಹಣ ಪ್ರಸಕ್ತ ಸಾಲಿನಲ್ಲಿ -ಠಿ; 1,314 ಕೋಟಿಗೆ ಇಳಿದಿದೆ ಎಂದು ಸರ್ಕಾರದ ಮಾಹಿತಿ
  • ಶಾಸನಸಭೆಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದ ಖಾಸಗಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net