ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ವಿತರಣೆ

Railway station (1)
Published on

ಶಿವಮೊಗ್ಗ: ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲ್ವೆ ನಿಲ್ದಾಣಗಳ ಕೌಂಟರ್‌ನಲ್ಲಿ ಟಿಕೆಟ್ ವಿತರಣೆ ಹಾಗೂ ಮಾಸಿಕ ಸೀಸನ್ ಪಾಸ್ ಸೇವೆ ಮಂಗಳವಾರದಿಂದ ಮತ್ತೆ ಆರಂಭಿಸಲಾಗಿದೆ.

ಮಾರ್ಚ್ 23ಕ್ಕೂ ಮುನ್ನ ನೀಡಲಾದ ಸೀಸನ್ ಟಿಕೆಟ್ ಹೊಂದಿದವರು ಪ್ರಯಾಣದ ಅವಕಾಶ ಕಳೆದುಕೊಂಡಿದ್ದರು. ಇದೀಗ ಟಿಕೆಟ್‌ನ ಕಾಲಮಿತಿಗೆ ಅನುಗುಣವಾಗಿ ಆಗಸ್ಟ್ 9ರಿಂದ ಈ ಟಿಕೆಟ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಸೀಸನ್ ಟಿಕೆಟ್ ಹೊಂದಿರುವವರಿಗೆ, ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಸೂಚಿತ ವ್ಯಕ್ತಿಗತ ಅಂತರ ಮಾರ್ಗಸೂಚಿಗಳು ಮತ್ತು ನೈರ್ಮಲ್ಯ ನಿಯಮಗಳನ್ನು ಸರಿಯಾಗಿ ಅನುಸರಿಸುವುದರೊಂದಿಗೆ, ಕಾಯ್ದಿರಿಸದ ರೈಲುಗಳು ಮತ್ತು ಕಾಯ್ದಿರಿಸದ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net