ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 2.74 ಲಕ್ಷ ಹುದ್ದೆಗಳ ಭರ್ತಿಗೆ ಸಿಕ್ಕಿದೆ ಮಹತ್ವದ ಸುಳಿವು

railway
Published on

ನವದೆಹಲಿ: ರೈಲ್ವೆಯಲ್ಲಿ ಸುಮಾರು 2.74 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿವೆ. ಅವುಗಳಲ್ಲಿ 1.7 ಲಕ್ಷಕ್ಕೂ ಹೆಚ್ಚು ಸುರಕ್ಷತಾ ವಿಭಾಗದಲ್ಲಿವೆ ಎಂದು ರಾಷ್ಟ್ರೀಯ ಸಾರಿಗೆ ಆರ್‌ಟಿಐ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದೆ.

ಮಧ್ಯಪ್ರದೇಶ ಮೂಲದ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಪ್ರಶ್ನೆಗಳಿಗೆ ರೈಲ್ವೆ ಉತ್ತರವಾಗಿ ಗ್ರೂಪ್ ಸಿ ವರ್ಗದಲ್ಲಿ 2,74,580 ಹುದ್ದೆಗಳು ಖಾಲಿಯಿವೆ. ಇದರಲ್ಲಿ ಲೆವೆಲ್ 1 ಅಥವಾ ಎಂಟ್ರಿ ಲೆವೆಲ್ ಸ್ಟಾಫ್ ಸೇರಿದ್ದಾರೆ. ಇದರಲ್ಲಿ ಸುರಕ್ಷತಾ ವಿಭಾಗದಲ್ಲಿ 1,77,924 ಹುದ್ದೆಗಳು ಒಳಗೊಂಡಿವೆ ಎಂದು ಹೇಳಲಾಗಿದೆ.

"01.06.2023 (ಪ್ರಾವಿಶನಲ್) ರಂತೆ ಭಾರತೀಯ ರೈಲ್ವೆಯಲ್ಲಿ ಗ್ರೂಪ್-ಸಿ (ಲೆವೆಲ್-1 ಸೇರಿದಂತೆ) ಖಾಲಿಯಿರುವ ಒಟ್ಟು ನಾನ್-ಗೆಜೆಟೆಡ್ ಹುದ್ದೆಗಳ ಸಂಖ್ಯೆ 2,74,580" ಎಂದು ಸಚಿವಾಲಯ ಹೇಳಿದೆ. ಸುರಕ್ಷತಾ ವಿಭಾಗದಲ್ಲಿ 9.82 ಲಕ್ಷಕ್ಕೂ ಹೆಚ್ಚು ಹುದ್ದೆಗಳಿದ್ದು, ಇದರಲ್ಲಿ 8.04 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

"01.06.2023 ರಂತೆ (ಪ್ರಾವಿಶನಲ್) ಭಾರತೀಯ ರೈಲ್ವೇಯಲ್ಲಿ ಗ್ರೂಪ್-ಸಿ (ಲೆವೆಲ್-1 ಸೇರಿದಂತೆ) ಸುರಕ್ಷತಾ ವರ್ಗದಲ್ಲಿ ಮಂಜೂರಾದ ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ 982037, 804113 ಮತ್ತು 177924 " ಎಂದು ಆರ್​​​ಟಿಐ ಉತ್ತರಿಸಿದೆ. ಡಿಸೆಂಬರ್ 2022 ರಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆಯಲ್ಲಿ 3.12 ಲಕ್ಷ ಗೆಜೆಟೆಡ್ ಅಲ್ಲದ ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿಗೆ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net