

ರಾಣೆಬೆನ್ನೂರ: ನಗರದ ದೇವರಗುಡ್ಡ ರೈಲ್ವೆ ಗೇಟ್ 219ಕ್ಕೆ ಅಡ್ಡಲಾಗಿ ನಿಮಿರ್ಸುತ್ತಿರುವ ಮೇಲ್ಸೇತುವೆಗೆ ಭೂಮಿ ಕಳೆದುಕೊಂಡ ರೈತರ ಜಮೀನುಗಳಿಗೆ ಓಡಾಡಲು 10 ಮೀಟರ್ ಅಗಲ ಕಾಂಕ್ರೀಟ್ನ ಸವಿರ್ಸ್ ರಸ್ತೆ ನಿಮಿರ್ಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಥಳಿಯ ರೈತರು ಸೋಮವಾರ ರೈಲ್ವೆ ಇಲಾಖೆಯ ಹೆಚ್ಚುವರಿ ಮುಖ್ಯ ಇಂಜಿನಿಯರ್ ದೇವೇಂದ್ರ ಗುಪ್ತಾ ಅವರಿಗೆ ಒತ್ತಾಯಿಸಿದರು.
ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಅವರಿಗೆ ಸ್ಥಳಿಯ ರೈತರು ತಮ್ಮ ಅಹವಾಲು ಸಲ್ಲಿಸಿದರು. ರೈಲ್ವೆ ಇಲಾಖೆಯು 2023ನೇ ಸಾಲಿನಲ್ಲಿ ಮೇಲ್ಸೇತುವೆ ನಿಮಾರ್ಣಕ್ಕಾಗಿ 2.30 ಎಕರೆ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಿದೆ. ಇದೀಗ ಕಾಮಗಾರಿ ಮುಕ್ತಾಯ ಹಂತ ತಲುಪಿದೆ.
ಭೂ ಸ್ವಾಧಿನದ ಸಮಯದಲ್ಲಿ ಹಾವೇರಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂಮಿ ನೀಡಿದ ರೈತರು, ಮೇಲ್ಸೇತುವೆ ಹೋರಾಟ ಸಮಿತಿ, ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ 10 ಮೀ. ಅಗಲದ ಸರ್ವೀಸ್ ರಸ್ತೆ ನಿಮಿರ್ಸಿಕೊಡುವಂತೆ ಆಗ್ರಹಿಸಲಾಗಿತ್ತು. ಅದಕ್ಕೆ ರೈಲ್ವೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು.
ಆದರೆ, ಇದೀಗ ಕೇವಲ 6 ಮೀ. ವಿಸ್ತೀರ್ಣದ ರಸ್ತೆ ನಿಮಿರ್ಸಲಾಗುತ್ತಿದೆ. ಇದಲ್ಲದೆ ಭೂಮಿ ಕಳೆದುಕೊಂಡ ರೈತರಿಗೆ ಈವರೆಗೂ ಭೂ ಪರಿಹಾರ, ಬೆಳೆ ಪರಿಹಾರ ಹಾಗೂ ಕಟ್ಟಡ ಪರಿಹಾರ ನೀಡಿಲ್ಲ ಎಂದು ರೈತರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದೇವೇಂದ್ರ ಗುಪ್ತಾ ಮಾತನಾಡಿ, ಇಲಾಖೆ ನೀಡಿದ ನೀಲನೆ ಪ್ರಕಾರ ಮೇಲ್ಸೇತುವೆ ಹಾಗೂ ಸರ್ವೀಸ್ ರಸ್ತೆ ನಿಮಿರ್ಸಲಾಗುತ್ತಿದೆ. ನಂತರ ಸಾರ್ವಜನಿಕರ ಕೋರಿಕೆಯಂತೆ ಸರ್ವೀಸ್ ರಸ್ತೆ ಅಗಲವನ್ನು 8 ಮೀಟರ್ಗೆ ವಿಸ್ತರಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚಚಿರ್ಸಲಾಗುವುದು. ನಂತರ ಪರಿಹಾರ ವಿಚಾರದಲ್ಲಿ ಎರಡ್ಮೂರು ಬಾರಿ ದರ ಹೆಚ್ಚಳಕ್ಕೆ ಪಟ್ಟು ಹಿಡಿದ ಪರಿಣಾಮ ವಿಳಂಬವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಪ್ರಮುಖರಾದ ರವೀಂದ್ರಗೌಡ ಪಾಟೀಲ, ಪ್ರಕಾಶ ಪೂಜಾರ, ನಿಂಗಪ್ಪ ಹೊನ್ನಾಳಿ, ಶಂಕರ ಪಾಟೀಲ, ಜಗದೀಶ ನರಸಗೊಂಡರ, ಬಸಣ್ಣ ಹೊನ್ನಾಳಿ, ಮಾರುತಿ ದೊಡ್ಡಮನಿ, ಜಗದೀಶ ಕೆರೂಡಿ, ಹೊನ್ನಪ್ಪ ಹೊಳೆಯಮ್ಮನವರ, ಶಂಕ್ರಪ್ಪ ನರಸಗೊಂಡರ, ರಾಜು ಹೊಳೆಯಮ್ಮನವರ ಮತ್ತಿತರರಿದ್ದರು.