ರಾಯಚೂರು: ಪತ್ನಿಯ ಶೀಲ ಶಂಕಿಸಿ, ತನಗೆ ಹುಟ್ಟಿಲ್ಲ ಅಂತಾ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

Father sons
Published on

ರಾಯಚೂರು: ಪತ್ನಿಯ ಮೇಲೆ ಅನೈತಿಕ ಸಂಬಂಧ ಆರೋಪ ಹೊರಿಸಿ, ಆಕೆಯ ಮೇಲಿನ ಸಿಟ್ಟಿಗೆ ಏನೂ ಅರಿಯದ ಇಬ್ಬರು ಕಂದಮ್ಮಗಳನ್ನು ಪಾಪಿ ತಂದೆ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ದೇವದುರ್ಗ ತಾಲೂಕಿನ ಜಕ್ಲೇರ್ ದೊಡ್ಡಿಯಲ್ಲಿ ನಡೆದಿದೆ.

ಶಿವರಾಜ್ (3) ರಾಘವೇಂದ್ರ (5) ಕೊಲೆಯಾದ ಮಕ್ಕಳು. ನಿಂಗಪ್ಪ ತಿರುಮಲಯ್ಯ ಕೊಲೆ ಮಾಡಿದ ಪಾಪಿ ತಂದೆ. ಪತ್ನಿ ಶೀಲ ಶಂಕಿಸಿ ತನ್ನಿಬ್ಬರು ಮಕ್ಕಳನ್ನು ತನ್ನ ಕೈಯ್ಯಾರ ಕೊಲೆ ಮಾಡಿದ್ದಾನೆ. ಫೆ. 11ರಂದು ರಾತ್ರಿ 8.30ಕ್ಕೆ ಈ ಭೀಕರ ಹತ್ಯೆ ನಡೆದಿದೆ.

ಗಂಡ ನಿಂಗಪ್ಪ ತಿರುಮಲ್ಲಯ್ಯ ವಿರುದ್ಧ ಪತ್ನಿ ದೂರು ನೀಡಿದ್ದು, ತನ್ನ ಮೇಲೆ ಅಕ್ರಮ ಸಂಬಂಧ ಆರೋಪ ಹೊರಿಸಿ, ನಿಂದಿಸಿದ್ದಲ್ಲದೆ, ಎರಡೂ ಮಕ್ಕಳು ನನಗೆ ಹುಟ್ಟಿಲ್ಲ, ಅವರನ್ನು ಸಾಯಿಸುತ್ತೇನೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದನು. ಇದಾದ ಬಳಿಕ ಮಕ್ಕಳಿಬ್ಬರನ್ನು ಕೆ. ಇರಬಗೇರಾದಿಂದ ಜಕ್ಲೇರದೊಡ್ಡಿಗೆ ಕರೆದೊಯ್ದು, ತನ್ನ ಕೈಗಳಿಂದ ಕುತ್ತಿಗೆಯನ್ನು ಹಿಸುಕಿ ಮಕ್ಕಳಿಬ್ಬರು ಕೊಲೆ ಮಾಡಿದ್ದು, ನನ್ನ ಗಂಡನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾಳೆ.

ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net