

ರಾಯಚೂರು: ಮಂತ್ರಿಗಳು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ತಕ್ಷಣ ಸಿಎಂ ಬದಲಾವಣೆ ಎಂಬ ವಿಷಯಗಳ ಬಗ್ಗೆ ಚರ್ಚೆಗಳಾಗುತ್ತವೆ ಆದರೆ ಬಿಜೆಪಿಯವರು ಮಾಡುವ ಸುಳ್ಳು ಆರೋಪಗಳಿಗೆ ರಾಜಿನಾಮೆ ಕೊಡಲು ಆಗುತ್ತದೆಯೇ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಆರ್.ಅಶೋಕ್ ತಾನು ರಾಜಿನಾಮೆ ಕೊಡುತ್ತೇನೆ ಸಿಎಂ ರಾಜಿನಾಮೆ ಕೊಡುತ್ತಾರಾ ಎಂದು ಪ್ರಶಿಸಿದ್ದು, ಸರ್ಕಾರದ ಜಮೀನು ಪಡೆದ ಆರೋಪದಲ್ಲಿ ಆರ್.ಅಶೋಕ ಇದ್ದು, ಅವರು ತಪ್ಪು ಮಾಡಿದ್ದರೆ ರಾಜಿನಾಮೆ ಕೊಟ್ಟುಬಿಡಲಿ ನಾನು ತಪ್ಪು ಮಾಡಿಲ್ಲ ಎಂದರು.
ಜಿಟಿ ದೇವೇಗೌಡ ಮುಡಾ ಹಗರಣದ ವಿಚಾರವಾಗಿ ನನ್ನ ಪರವಾಗಿ ಮಾತನಾಡಿಲ್ಲ. ಅವರು ಮುಡಾ ಸದಸ್ಯರಾಗಿದ್ದಾರೆ. ಮುಡಾ ನಿವೇಶನದ ವಿಚಾರವಾಗಿ ಅವರು ಸತ್ಯವನ್ನೇ ಹೇಳಿದ್ದಾರೆ. ಸತೀಶ್ ಜಾರಹೊಳಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಊಹಾಪೋಹ ನಡೆಯುತ್ತಿದ್ದು, ಸಿಎಂ ಸ್ಥಾನದಿಂದ ನನ್ನನ್ನು ಕೆಳಗಿಳಿಸಲು ಕಾಂಗ್ರೆಸ್ ನಾಯಕರು ಯೋಚಿಸಿಲ್ಲ ಎಂದು ತಿಳಿಸಿದರು. ಬಿಜೆಪಿ ಸುಳ್ಳು ಆರೋಪಗಳಿಗೆ ಉತ್ತರ ನೀಡುತ್ತೇವೆ ವಸ್ತು ಸ್ಥಿತಿಯನ್ನು ಜನರ ಮುಂದೆ ಇಡುತ್ತೇವೆ ಎಂದರು.