ರಾಯರ ಮಠಕ್ಕೆ 3.38 ಕೋಟಿ ಆದಾಯ

IMG-20241025-WA0014
Published on

ರಾಯಚೂರು: ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 3.38 ಕೋಟಿ ರೂ.ಸಂಗ್ರಹವಾಗಿದೆ. ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶ್ರೀಮಠದ ಅಧಿಕಾರಿಗಳು ಶುಕ್ರವಾರ 31 ದಿನಗಳ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 3,38,02,400 ರೂ. ಸಂಗ್ರಹವಾಗಿದೆ. ಇದಲ್ಲದೇ ಹರಕೆ ರೂಪದಲ್ಲಿ ಭಕ್ತರು 136 ಗ್ರಾಮ ಚಿನ್ನ, 1.18 ಕೆ.ಜಿ ಬೆಳ್ಳಿ ರಾಯರಿಗೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net