

ಬೆಂಗಳೂರು: ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇ ಬೇಕೆಂದು ಹೈಕಮಾಂಡ್ ಸಂಕಲ್ಪಮಾಡಿದ್ದು, ಕೈ ನಾಯಕ ರಾಹುಲ್ ಗಾಂಧಿ, ಪಕ್ಷದ ಶಾಸಕರು, 2018ರ ವಿಧಾನಸಭೆಯಲ್ಲಿ ಸೋಲುಂಡ ಅಭ್ಯರ್ಥಿಗಳು, ಹಿರಿಯ ನಾಯಕರನ್ನು ಒಟ್ಟಿಗೆ ಕೂರಿಸಿಕೊಂಡು ಬೊಧನೆ ಮಾಡಿದ್ದು, ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಸ್ಪಷ್ಟ ದಾರಿ ತೋರಿಸಿದ್ದಾರೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಶೇ.66 ಸ್ಥಾನಗಳನ್ನು ಗೆಲ್ಲಬಹು ದೆಂಬ ಪಕ್ಷದ ನಾಯಕರ ಆಶಾಭಾವನೆ ಕಂಡು ಹಾಲಿ ಮತ್ತು ಮಾಜಿ ಶಾಸಕರು ಹುರುಪಿನಲ್ಲಿ ಚಪ್ಪಾಳೆ ತಟ್ಟಿ ತಮ್ಮ ಸಹಮತ ವ್ಯಕ್ತಪಡಿಸಿದರು.
ಮೋದಿ ಭಾಷಣ ಮಾಡಿದ್ರೆ ಜನ ನಗ್ತಾರೆ: ಮೊದಲು ಮೋದಿ ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇಂದು ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ರಾಜ್ಯವೇ ನಗಲಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು. ದೇಶದ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಇದು 40 ಪರ್ಸೆಂಟ್ ಸರ್ಕಾರ ಎಂದು ನಾವು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಹೇಳುತ್ತಿದೆ. ಆದರೆ ಮೋದಿ ಬಂದು ಭ್ರಷ್ಟಾಚಾರದ ವಿರುದ್ದ ಮಾತನಾಡಿದರೆ ಅದೊಂದು ಅಪಹಾಸ್ಯವಾಗಲಿದೆ. ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ದೇಶದ ಆರ್ಥಿಕತೆ ಹಾಳಾಗಿದೆ: ದೇಶ ಹಾಗೂ ರಾಜ್ಯದ ಮುಂದೆ ನಿರುದ್ಯೋಗ ಸಮಸ್ಯೆ ದೊಡ್ಡದಾಗಿದೆ. ದೇಶದ ಆರ್ಥಿಕತೆ ಹಾಳಾಗಿದೆ, ಬೆಲೆ ಏರಿಕೆ ಹೆಚ್ಚಾಗಿದೆ. ನಮ್ಮ ಶಕ್ತಿಯಾಗಿದ್ದ ಆರ್ಥಿಕತೆ ದುರ್ಬಲವಾಗಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದರು. ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ಈಗ ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ. ಇದು ಜನರಿಂದ ಆಯ್ಕೆಯಾದ ಪರಿಪೂರ್ಣ ಸರ್ಕಾರವಲ್ಲ. ಹಣದ ಬಲ ದಿಂದ ರಚನೆಯಾದ ನೈತಿಕ ಸರ್ಕಾರ ಎಂದು ಟೀಕಿಸಿದರು.
ಸಂವಾದ: ಸದಸ್ಯತ್ವ ಅಭಿಯಾನದಲ್ಲಿ ಮುತುವರ್ಜಿ ವಹಿಸಿದ ಪ್ರಮುಖ ಕಾರ್ಯಕರ್ತ ರೊಂದಿಗೆ ರಾಹುಲ್ ಗಾಂಧಿ ವಿಡಿಯೋ ಸಂವಾದ ನಡೆಸಿದರು. ಕಾರ್ಯಕರ್ತ ರಾದ ಶಂಕರ್, ಸವಿತಾ ರಘು ಅವರೊಂದಿಗೆ ಮಾತನಾಡಿದ ರಾಹುಲ್ ಕಾಂಗ್ರೆಸ್ ಏಕೆ ಇಷ್ಟ, ಬಿಜೆಪಿ ದೇಶವನ್ನು ಯಾವ ರೀತಿ ದುರ್ಬಲ ಮಾಡುತ್ತಿದೆ ಎಂಬಿ ತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಬಯಸಿದರು.
ಪ್ರವಾಸದಿಂದ ಸಂದೇಶ ರವಾನೆ: ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಾಗೂ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿಕೊಡುವ ಮೂಲಕ ರಾಹುಲ್ ಗಾಂಧಿ ರಾಜ್ಯ ರಾಜಕೀಯಕ್ಕೆ ಒಂದು ಸರಿಯಾದ ಸಂದೇಶ ರವಾನಿಸಿ ದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಒಟ್ಟಾಗಿ ಸೇರುವುದು ಆರಂಭ, ಒಟ್ಟಾಗಿ ಆಲೋಚಿಸುವುದು ಪ್ರಗತಿ, ಒಟ್ಟಾಗಿ ಕೆಲಸ ಮಾಡುವುದು ಯಶಸ್ಸು. ನಾವೆಲ್ಲರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾತು ನೀಡುತ್ತೇನೆ ಎಂದು ಹೇಳಿದರು.
ಒಂದು ಬಾರಿ ಗೆದ್ದವರ ಜತೆ ಸಭೆ: 2018ರ ಚುನಾವಣೆಯಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ ಶಾಸಕರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿ, ಚುನಾವಣೆಗೆ ಈಗಿನಿಂದಲೇ ತಯಾರಾಗುವಂತೆ ಸೂಚನೆ ನೀಡಿದರು. ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಹೆಚ್ಚಿಸಬೇಕು, ಬಿಜೆಪಿಯ ಕೋಮು ಆಧಾರಿತ ರಾಜಕಾರಣಕ್ಕೆ ಎದೆಗುಂದದಿರಿ ಎಂದು ಕರೆನೀಡಿದರು.
ರಾಗಾಗೆ ಖುರ್ಚಿ ಬಿಟ್ಟ ಡಿಕೆಶಿ: ಕೆಪಿಸಿಸಿ ಕಚೇರಿಯ ತಮಗೆ ಮೀಸಲಾದ ಆಸನದಲ್ಲಿ ರಾಹುಲ್ ಗಾಂಧಿಯವರನ್ನು ಕೂರಿಸಿದ ಡಿ.ಕೆ.ಶಿವಕುಮಾರ್ ಫೋಟೋ ತೆಗೆಸಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಆ ಕ್ಷಣದ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿ, ನಮ್ಮ ದಾರಿದೀಪ ಎಂದು ಶೀರ್ಷಿಕೆ ನೀಡಿದ್ದಾರೆ.
ಅಲ್ಪಸಂಖ್ಯಾತರು ರಾಜ್ಯದಲ್ಲಿ ಆತಂಕದಲ್ಲಿದ್ದಾರೆ. ಅನೇಕ ಅಲ್ಪಸಂಖ್ಯಾತರು ನನ್ನ ಜತೆ ಮಾತನಾಡಿದ್ದಾರೆ. ನಾವು ಇನ್ನೂ ಹೆಚ್ಚು ಅವರಿಗೆ ನೆರವಾಗಬೇಕೆಂಬ ಅಭಿಪ್ರಾಯ ಇದೆ. ಅದಕ್ಕಾಗಿ ಕಾಂಗ್ರೆಸ್ ಈ ವಿಷಯದಲ್ಲಿ ಅಗ್ರೆಸಿವ್ ಆಗಿರಬೇಕು. ಇಲ್ಲವಾದರೆ ಜಾತ್ಯತೀತತೆ ರಕ್ಷಣೆ ಮಾಡಲು ಸಾಧ್ಯವಾಗಲ್ಲ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ನಮಗೆ ಬಿಜೆಪಿ ಶತ್ರುವಲ್ಲ, ಈ ದೇಶಕ್ಕೆ ನಿಜ ವಾದ ಶತ್ರು ಆರ್ಎಸ್ಎಸ್. ಈ ದೇಶಕ್ಕೆ ಶತ್ರುವಾದವರು ಕಾಂಗ್ರೆಸ್ ಶತ್ರುವಾಗುವರು. ಇವರ ವಿರುದ್ಧ ಹೋರಾಡಬೇಕಾದರೆ ಸೈದ್ಧಾಂತಿಕವಾಗಿ ಸರ್ವಧರ್ಮ ಸಮಬಾಳು ತತ್ವದ ಬಗ್ಗೆ ಅರಿವು ಹೊಂದಬೇಕು. | ಬಿ.ಕೆ.ಹರಿಪ್ರಸಾದ್ ಪರಿಷತ್ ಪ್ರತಿಪಕ್ಷ ನಾಯಕ ಬಿಜೆಪಿ ದೇಶವನ್ನು ನಾಶ ಮಾಡುತ್ತಿರುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸುತ್ತೇವೆೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ 2023ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ. | ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಾಜ್ಯದಲ್ಲಿ 60 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಇವರಲ್ಲಿ ಒಬ್ಬೊಬ್ಬರೂ 3 ಮತ ತಂದರೂ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಬಾಯಿಂದ ಬಾಯಿಗೆ ಪ್ರಚಾರ ಸಾಗಬೇಕು. ನನ್ನ ಮನವಿ ಎಂದರೆ ನಮ್ಮ ಜತೆ ಇರುವವರಿಗೆ ನಾವು ಧ್ವನಿ ಎತ್ತಬೇಕು. | ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು, 3, 4ನೇ ಹಂತದ ನಾಯಕರನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಎಲ್ಲರಿಗೂ ಸೇವಾದಳ ತರಬೇತಿ ಕಡ್ಡಾಯಗೊಳಿಸಬೇಕು. ದೂರವಾಗಿರುವ ನಾಯಕರನ್ನು ಮತ್ತೆ ಪಕ್ಷದತ್ತ ಸೆಳೆಯುವ ಕೆಲಸ ಆಗಬೇಕು. | ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸದಸ್ಯತ್ವ ಅಭಿಯಾನದಲ್ಲಿ ಪಕ್ಷವು ದೇಶದಲ್ಲೇ ಮುಂಚೂಣಿಯಲ್ಲಿದೆ. 2023ರ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ. | ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ