ಮರಿಯಾನೆ ನೋವಿಗೆ ಮರುಗಿ ಸಿಎಂಗೆ ರಾಹುಲ್ ಗಾಂಧಿ ಪತ್ರ; ಸೋನಿಯಾ ಜತೆ ನಾಗರಹೊಳೆಯಲ್ಲಿ ಪುತ್ರ

Rahul Gandhi
Published on

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂದು ತಾಯಿ ಸೋನಿಯಾ ಗಾಂಧಿ ಅವರ ಜತೆ ನಾಗರಹೊಳೆ ಅಭಯಾರಣ್ಯಕ್ಕೆ ಹೋಗಿದ್ದಾರೆ. ವಿಶೇಷವೆಂದರೆ, ಈ ಅಮ್ಮ-ಮಗ ಇನ್ನೊಂದು ತಾಯಿ-ಮಗುವಿನ ಸಂಕಷ್ಟಕ್ಕೆ ಮರುಗಿದ್ದಾರೆ.

ಅಭಯಾರಣ್ಯದಲ್ಲಿ ಆನೆಯೊಂದು ಗಾಯಗೊಂಡಿರುವ ತನ್ನ ಮರಿಯಾನೆಯ ಸ್ಥಿತಿಗೆ ಮರುಗುತ್ತಿರುವುದನ್ನು ನೋಡಿ ಸ್ಪಂದಿಸಿರುವ ರಾಹುಲ್​ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಮೇಲೆ ತಿಳಿಸಲಾದ ಆನೆಮರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ ನಾನು ರಾಜಕೀಯ ಗಡಿಯನ್ನು ದಾಟಿ ಈ ಆನೆಮರಿಗೆ ಅನುಕಂಪದ ಮೇರೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಕೋರಿಕೊಳ್ಳುತ್ತಿದ್ದೇನೆ. ಸೂಕ್ತ ಚಿಕಿತ್ಸೆ ಸಿಕ್ಕರೆ ಈ ಆನೆಮರಿ ಬದುಕುಳಿಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನೀವು ಅದಕ್ಕೆ ಚಿಕಿತ್ಸೆ ಕೊಡಿಸುವಿರಿ ಎಂದು ಆಶಿಸಿದ್ದೇನೆ ಎಂಬುದಾಗಿ ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net