More

    180 ಕೆ.ಜಿ. ತೂಕದ ವ್ಯಕ್ತಿ, ಧೋಖಾ ವ್ಯಕ್ತಿತ್ವ: ಖಾಕಿ ಧರಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಇನ್​ಸ್ಪೆಕ್ಟರ್ ಅರೆಸ್ಟ್​

    ನವದೆಹಲಿ: ನೂರೆಂಬತ್ತು ಕೆ.ಜಿ. ತೂಕದ 23 ವರ್ಷದ ಯುವಕನೊಬ್ಬ ಪೊಲೀಸ್ ಸಮವಸ್ತ್ರ ಧರಿಸಿ, ಇನ್​ಸ್ಪೆಕ್ಟರ್ ಎಂದು ಸುಳ್ಳು ಹೇಳಿ ಹಣ ವಸೂಲಿ ಮಾಡುತ್ತಿದ್ದು, ಕೊನೆಗೂ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೋಸ ಮಾಡಲು ಹೋಗಿ ಸಿಕ್ಕಿಹಾಕಿಕೊಂಡವನ ಹೆಸರು ಮುಖೇಶ್ ಯಾದವ್.

    ಉತ್ತರಪ್ರದೇಶದ ಘಾಜಿಯಾಬಾದ್ ನಿವಾಸಿಯಾಗಿರುವ ಮುಖೇಶ್ ಯಾದವ್, ತುಂಡ್ಲಾದ ಜರೌಲಿಕಾಲ ಮೋರ್​ನ ರಾಜಾತಾಲ್​ ಚೌಕಿ ಬಳಿ ಇನ್​ಸ್ಪೆಕ್ಟರ್ ಸಮವಸ್ತ್ರ ಧರಿಸಿ ರಾತ್ರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದನ್ನು ಚಾಳಿ ಮಾಡಿಕೊಂಡಿದ್ದ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ರಹಸ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಆರಂಭದಲ್ಲಿ ಟೋಲ್​ನಿಂದ ಉಚಿತವಾಗಿ ಪಾಸ್ ಆಗಲು ಇನ್​ಸ್ಪೆಕ್ಟರ್ ಐಡಿ ಮಾಡಿಟ್ಟುಕೊಂಡಿದ್ದೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿರುವ ಈತ, ಕೊನೆಗೆ ಯುನಿಫಾರ್ಮ್ ಧರಿಸಿಕೊಂಡು ಇನ್​ಸ್ಪೆಕ್ಟರ್ ಎಂದು ಹೇಳಿಕೊಂಡು ವಸೂಲಿಗೆ ಇಳಿದಿದ್ದರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತಾನು 180 ಕೆ.ಜಿ. ತೂಕ ಇರುವುದನ್ನೂ ಹೇಳಿಕೊಂಡಿದ್ದಾನೆ. ಆರೋಪಿಯಿಂದ ಎಟಿಎಂ ಕಾರ್ಡ್​, ಪ್ಯಾನ್ ಕಾರ್ಡ್, ಫೇಕ್​ ಐಡಿ ಕಾರ್ಡ್ ಕೂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts