More

    ಎಲ್ಲೆಂದರಲ್ಲಿ ಮೊಬೈಲ್​ಫೋನ್​ ಚಾರ್ಜ್​ಗೆ ಹಾಕ್ತೀರಾ?; ಹಾಗಿದ್ರೆ ಇದನ್ನು ತಪ್ಪದೇ ಓದಿ..

    ಬೆಂಗಳೂರು: ಇದು ಸ್ಮಾರ್ಟ್​ಫೋನ್​ ಬಳಸುವವರೆಲ್ಲ ಓದಲೇಬೇಕಾದ ಸುದ್ದಿ. ಅದರಲ್ಲೂ ಎಲ್ಲೆಂದರಲ್ಲಿ ಮೊಬೈಲ್​ಫೋನ್​ ಚಾರ್ಜಿಂಗ್​ಗೆ ಹಾಕುವವರು ತಪ್ಪದೇ ಗಮನಿಸಬೇಕಾದ ಮಾಹಿತಿ. ಏಕೆಂದರೆ ಇಲ್ಲೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್​ಫೋನ್ ಚಾರ್ಜ್​ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

    ಹಾಗಂತ ಇಂಥದ್ದೊಂದು ನಷ್ಟಕ್ಕೆ ಒಳಗಾಗಿದ್ದು ಯಾರೋ ಅನಕ್ಷರಸ್ಥರು, ಇಲ್ಲವೇ ಅಂಥ ವಿದ್ಯೆ ಇಲ್ಲದವರೇನಲ್ಲ. ಏಕೆಂದರೆ ಹೀಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು ಕಂಪನಿಯೊಂದರ ಸಿಇಒ. ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಸಾರ್ವಜನಿಕ ಸ್ಥಳದಲ್ಲಿ ಯುಎಸ್‌ಬಿ ಪೋರ್ಟ್ ಮೂಲಕ ಮೊಬೈಲ್​ಫೋನ್​ ಚಾರ್ಜಿಂಗ್​ಗೆ ಹಾಕಿದ್ದರು. ಈ ಸಂದರ್ಭದಲ್ಲಿ ಹ್ಯಾಕರ್‌ಗಳು ಅವರ ಡೇಟಾ ಕದ್ದು, ಆ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ನಡೆಸಿ 16 ಲಕ್ಷ ರೂ. ಎಗರಿಸಿದ್ದಾರೆ. ಈ ಕುರಿತು ಸೈಬರ್ ಸೆಲ್​ನಲ್ಲಿ ದೂರು ದಾಖಲಾಗಿದೆ. ಅಂದಹಾಗೆ ಹೀಗಾಗಲು ಅವರ ಫೋನ್ ಜ್ಯೂಸ್ ಜ್ಯಾಕಿಂಗ್​ಗೆ ಒಳಗಾಗಿದ್ದೇ ಕಾರಣ.

    ಜ್ಯೂಸ್ ಜ್ಯಾಕಿಂಗ್ ಎಂದರೆ…

    ಜ್ಯೂಸ್ ಜ್ಯಾಕಿಂಗ್​ ಎಂದರೆ ಒಂದು ರೀತಿಯ ಹ್ಯಾಕಿಂಗ್. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಅಥವಾ ಮಾಲ್‌ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮೂಲಕ ಅಪರಾಧಿಗಳು ಯಾವುದೇ ಮೊಬೈಲ್​ಫೋನ್​, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಇತರ ಸಾಧನಗಳಲ್ಲಿ ಮಾಲ್‌ವೇರ್ ಅಥವಾ ವೈರಸ್ ಸ್ಥಾಪಿಸಿ ವೈಯಕ್ತಿಕ ಡೇಟಾ ಕಳವು ಮಾಡುವುದನ್ನು ಜ್ಯೂಸ್ ಜ್ಯಾಕಿಂಗ್ ಎನ್ನುತ್ತಾರೆ.

    ಇದು ನಡೆಯುವುದು ಹೀಗೆ..

    ಸ್ಮಾರ್ಟ್‌ಫೋನ್​ ಡೇಟಾವನ್ನು ಯುಎಸ್‌ಬಿ ಕೇಬಲ್‌ನಿಂದ ವರ್ಗಾವಣೆ ಮಾಡುವುದು ಸಾಮಾನ್ಯ ಸಂಗತಿ. ಸೈಬರ್ ವಂಚಕರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೀಗೆ ಯುಎಸ್​ಬಿ ಮುಖೇನ ಸ್ಮಾರ್ಟ್​ಫೋನ್ ಡೇಟಾ ಕದಿಯುತ್ತಾರೆ. ಅಂಥವರೇ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಚಾರ್ಜಿಂಗ್ ಪೋರ್ಟ್‌ ಇರಿಸಿರುತ್ತಾರೆ. ಅವುಗಳಿಂದ ಯಾರಾದರೂ ಎಲೆಕ್ಟ್ರಾನಿಕ್ ಡಿವೈಸ್ ಚಾರ್ಜಿಂಗ್ ಮಾಡಿಕೊಳ್ಳುವಾಗ ಇವರು ಅದರಲ್ಲಿನ ಡೇಟಾ ಕಳವು ಮಾಡುತ್ತಾರೆ.

    ಡೇಟಾ ಮಾತ್ರವಲ್ಲ, ಹಣ ಕೂಡ ಎಗರಿಸುತ್ತಾರೆ..

    ತಾವಿರಿಸಿದ ಯುಎಸ್​ಬಿ ಪೋರ್ಟ್​ಗಳಿಂದ ಯಾರಾದರೂ ಚಾರ್ಜ್​ ಮಾಡಿಕೊಳ್ಳಲು ಮುಂದಾದಾಗ ಈ ಸೈಬರ್ ವಂಚಕರು ಅಂಥ ಎಲೆಕ್ಟ್ರಾನಿಕ್ ಉಪಕರಣಕ್ಕೆ ವೈರಸ್ ಹಬ್ಬಿಸುತ್ತಾರೆ ಅಥವಾ ಆ ಉಪಕರಣಗಳಲ್ಲಿನ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಕಳುಹಿಸುವ ಕಳ್ಳ ಅಪ್ಲಿಕೇಷನ್‌ ಇನ್‌ಸ್ಟಾಲ್ ಆಗುವಂತೆ ಮಾಡುತ್ತಾರೆ. ಇದರಿಂದ ಆ ಎಲೆಕ್ಟ್ರಾನಿಕ್ ಡಿವೈಸ್​ನಲ್ಲಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ನಂತರ ಅದೇ ಡೇಟಾ ಬಳಸಿ ಆನ್​​ಲೈನ್​ ಬ್ಯಾಂಕಿಂಗ್ ನಡೆಸಿ ಹಣ ಎಗರಿಸುತ್ತಾರೆ.

    ಇದೇ ಮೊದಲೇನಲ್ಲ…

    ಜ್ಯೂಸ್ ಜ್ಯಾಕಿಂಗ್ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಹ್ಯಾಕಿಂಗ್ ನಡೆದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಅಲ್ಲಿರುವ ಯುಎಸ್‌ಬಿ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಮೊಬೈಲ್​ಫೋನ್​ ಚಾರ್ಜ್ ಮಾಡಲು ಹಾಕಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹಣ ಕಡಿತಗೊಂಡಿರುವ ಸಂದೇಶ ಅವರ ಫೋನ್​ಗೆ ಬಂದಿತ್ತು. ಅವರು ತಮ್ಮ ಬ್ಯಾಂಕ್ ಖಾತೆಯಿಂದ 1.2 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆಯೂ ಸೈಬರ್ ಸೆಲ್‌ನಲ್ಲಿ ದೂರು ದಾಖಲಾಗಿತ್ತು.

    ನೀವು ಮಾಡಬೇಕಾದ್ದೇನು?

    ಸಾರ್ವಜನಿಕ ಪ್ರದೇಶಗಳಲ್ಲಿ ಸಿಗುವಂತಹ ಡೇಟಾ ಕೇಬಲ್‌ಗಳಲ್ಲಿ ಮೊಬೈಲ್​​​ಫೋನ್​ ಯಾವತ್ತೂ ಚಾರ್ಜ್​ ಮಾಡಿಕೊಳ್ಳಲು ಹೋಗಬೇಡಿ. ಆದರೆ ಎಸಿ ಪವರ್​ ಸಾಕೆಟ್ ಮೂಲಕ ಚಾರ್ಜಿಂಗ್ ಮಾಡಿಕೊಳ್ಳಬಹುದು. ಮಾಮೂಲಿ ಚಾರ್ಜರ್ ಮೂಲಕ ಡೇಟಾ ಕಳವು ಸಾಧ್ಯವಿಲ್ಲ. ಈ ಬಗ್ಗೆ ಇತರರಿಗೂ ತಿಳಿಸಿ.

    ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ

    ಗಾಂಜಾ ಮತ್ತಿನಲ್ಲಿದ್ದವನ ಕನಸಿಗೆ ಬಂದ ದೇವರು; ಆಮೇಲಾಗಿದ್ದೇ ಭೀಕರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts