Rahul Gandhi: ರಾಹುಲ್ ಗಾಂಧಿಗೆ ಭದ್ರತಾ ಲೋಪ?ಬೆಂಗಾವಲು ವಾಹನ ಪಕ್ಕ ಕೋಲು ಹಿಡಿದು ಸಾಗಿದ ಬೈಕ್​ ಸವಾರ!

Rahul gandhi
ರಾಹುಲ್​ ಗಾಂಧಿ
Published on

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಸೋಮವಾರ (ಸೆ.30) ಹರ್ಯಾಣದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಭದ್ರತಾ ಲೋಪವಾಗಿರುವ ಶಂಕೆ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಈ ಸಂಬಂಧದ ವೀಡಿಯೋ ವೈರಲ್ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವೀಡಿಯೋದಲ್ಲಿ ಕಂಡುಬರುವಂತೆ, ವಯಸ್ಸಾದ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಯವರ ಬೆಂಗಾವಲು ವಾಹನದ ಪಕ್ಕದಲ್ಲಿ ಮೋಟಾರ್‌ಸೈಕಲ್ ಅನ್ನು ಓಡಿಸುತ್ತಿದ್ದಾರೆ. ರಾಹುಲ್‌ ವಾಹನಕ್ಕೆ ಬಹುತೇಕ ಸಮಾನಾಂತರವಾಗಿ ಮೋಟಾರ್‌ಸೈಕಲ್ ಓಡುತ್ತಿದೆ, . ಸವಾರ ಕೋಲನ್ನು ಕೊಂಡೊಯ್ಯುತ್ತಿರುವುದನ್ನು ಸಹ ಕಾಣಬಹುದು. ಇದನ್ನು ಹರ್ಯಾಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಒಯ್ಯುತ್ತಾರೆ. ಇದು ಭದ್ರತಾ ವೈಫಲ್ಯವಲ್ಲದೆ ಇನ್ನೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅವರ "ಡೌನ್ ಟು ಅರ್ಥ್" ಚಿತ್ರಕ್ಕೆ ಒತ್ತು ನೀಡುವ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದರೂ, ವೀಡಿಯೊವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ, ಘಟನೆಯು ಭದ್ರತಾ ಉಲ್ಲಂಘನೆಗೆ ಉದಾಹರಣೆಯೇ? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net