Diabetes: ಈರುಳ್ಳಿಯನ್ನು ಹಾಲೊಟ್ಟೆಯಲ್ಲಿ ಹೀಗೆ ತಿಂದರೆ ಬ್ಲಡ್ ಶುಗರ್‌ ಕಂಟ್ರೋಲ್‌ನಲ್ಲಿರುತ್ತೆ!

onion
ಈರುಳ್ಳಿ
Published on

ಈರುಳ್ಳಿ ಆಹಾರದ ಪ್ರಮುಖ ಭಾಗವಾಗಿದ್ದು, ತಿಂದ ಆಹಾರ ಜೀರ್ಣವಾಗಲು ಮತ್ತು ಶಕ್ತಿ ವರ್ದನೆಗೆ ಅನುಕೂಲವಾಗಿದೆ. ಅಷ್ಟೇ ಅಲ್ಲ, ಮಧುಮೇಹಿ(Diabetes)ಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈರುಳ್ಳಿಯನ್ನು ವಿನೆಗರ್ ಜೊತೆಗೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಈರುಳ್ಳಿಯನ್ನು ಅಂಗಡಿಗಳಲ್ಲಿ ಸಿಗುವ ವಿನೆಗರ್ ನೊಂದಿಗೆ ಬಳಸಿದರೆ ಅದರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. ವಿನೆಗರ್‌ನಲ್ಲಿ ಈರುಳ್ಳಿ ನೆನೆಸಿಟ್ಟು ತಿನ್ನುವುದರಿಂದ ಮಧುಮೇಹಿಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ.

ನಾಟಿ ಅಥವಾ ಸಣ್ಣ ಕೆಂಪು ಈರುಳ್ಳಿಯನ್ನು ವಿನೆಗರ್‌ನಲ್ಲಿ ನೆನೆಸಿದ ನಂತರ ವಿಟಮಿನ್ ಬಿ 9 ಮತ್ತು ಫೋಲೇಟ್‌ನಿಂದ ಸಮೃದ್ಧವಾಗುತ್ತವೆ. ಇದು ಹೃದಯದ ಆರೋಗ್ಯವನ್ನು ಸಹ ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಅಷ್ಟೇ ಅಲ್ಲ, ಈರುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ವಿನೆಗರ್‌ನಲ್ಲಿ ನೆನೆಸಿದ ಈರುಳ್ಳಿಯನ್ನು ತಿನ್ನುವುದು ಉತ್ತಮ ಎಚ್​ಡಿಎಲ್​ ಕೊಲೆಸ್ಟ್ರಾಲ್ ಅನ್ನು ಶೇ.30 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಯುತ್ತೆ: Diabetes

ಈರುಳ್ಳಿ ತಿನ್ನುವುದರಿಂದ ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅನ್ನು ತಡೆಯಬಹುದು. ಈರುಳ್ಳಿಯನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ವಿನೆಗರ್‌ನಲ್ಲಿ ನೆನೆಸಬಾರದು. ಈರುಳ್ಳಿ ಕರಗಲು ಪ್ರಾರಂಭವಾಗುತ್ತದೆ ಮತ್ತು ರುಚಿ ಕಳೆದುಕೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net