ಕಲ್ಲಿದ್ದಲು ತುಂಬಿದ್ದ ಕಾರ್ಮಿಕರ ಸೈಕಲ್​ ನೂಕಿದ ರಾಹುಲ್ ಗಾಂಧಿ!

Untitled design (12)
Published on

ಜಾರ್ಖಂಡ್​: ಭಾರತ ಜೋಡೋ ನ್ಯಾಯ್​ ಯಾತ್ರೆಯನ್ನು ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ 200 ಕೆಜಿ ಕಲ್ಲಿದ್ದಲು ತುಂಬಿದ್ದ ಯುವಕನ ಸೈಕಲ್ ತಳ್ಳಲು ಯತ್ನಿಸಿದ್ದಾರೆ. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ.

ರಾಂಚಿಗೆ ತೆರಳುತ್ತಿದ್ದ ದಾರಿ ಮಧ್ಯೆ ತಮ್ಮ ಸೈಕಲ್‌ಗಳಲ್ಲಿ 200ರಿಂದ 250 ಕೆಜಿ ತೂಕದ ಕಲ್ಲಿದ್ದಲನ್ನು ಸಾಗಿಸುತ್ತಿದ್ದ ಕೂಲಿ ಕಾರ್ಮಿಕರನ್ನು ನೋಡಿದ ರಾಹುಲ್ ಗಾಂಧಿ, ಅವರ ಸೈಕಲ್​ ತಳ್ಳುವ ಮೂಲಕ ಕಾರ್ಮಿಕರಿಗೆ ಸಹಾಯಹಸ್ತ ನೀಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿದ ಕಾಂಗ್ರೆಸ್​, "ಪ್ರತಿದಿನ ಸುಮಾರು 30-40 ಕಿಲೋಮೀಟರ್ ನಡೆಯಬೇಕು. ಕಠಿಣ ಪರಿಶ್ರಮ ಪಟ್ಟರೂ ಈ ಕೆಲಸದಿಂದ ಬರುವ ಆದಾಯವು ತುಂಬಾ ಕಡಿಮೆ" ಎಂದು ಕಾರ್ಮಿಕರು ಹೇಳಿರುವುದಾಗಿ ತಿಳಿಸಿದೆ.

"ಭಾರತವನ್ನು ಕಟ್ಟುವಲ್ಲಿ ತೊಡಗಿರುವ ಈ ಕಾರ್ಮಿಕರಿಗೆ ಅವರ ಶ್ರಮಕ್ಕೆ ಸಮಾನವಾದ ವೇತನ ಸಿಗಬೇಕು, ಅವರಿಗೆ ನ್ಯಾಯ ಸಿಗಬೇಕು. ಇದು ಯಾತ್ರೆಯ ಗುರಿಯಾಗಿದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರ ನೋವನ್ನು ಆಲಿಸುವುದು, ಅವರಿಗೆ ನ್ಯಾಯ ಒದಗಿಸುವುದು" ಯಾತ್ರೆಯ ಉದ್ದೇಶವಾಗಿದೆ ಎಂದು ಪೋಸ್ಟ್​ನಲ್ಲಿ ಹೇಳಿದೆ.

ಫೆಬ್ರವರಿ 2ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ

ನೂತನವಾಗಿ ನೇಮಕಗೊಂಡ ಸಿಎಂ ಚಂಪೈ ಸೊರೆನ್ ಆತ್ಮೀಯ ಸ್ವಾಗತ ನೀಡಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net