ದೀಪಾವಳಿಗೆ ಸಿಹಿ-ತಿಂಡಿ ತಯಾರಿಸಿದ ರಾಹುಲ್! ವಿಡಿಯೋ ವೈರಲ್ | Rahul Gandhi

Bbau (42)
Published on

ನವದೆಹಲಿ: ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲ ಸಿಹಿ ಅಂಗಡಿಗೆ ಸೋಮವಾರ ಭೇಟಿ ನೀಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಸಿಹಿ-ತಿಂಡಿ ತಯಾರಿಸಲು ಪ್ರಯತ್ನ ಮಾಡಿದರು. ಅಲ್ಲದೆ, ಈ ಕುರಿತು ರಾಹುಲ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

"ಹಳೆ ದೆಹಲಿಯ ಪ್ರಸಿದ್ಧ ಮತ್ತು ಐತಿಹಾಸಿಕ ಘಂಟೆವಾಲಾ ಸಿಹಿ ಅಂಗಡಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡೂ ತಯಾರಿಸಲು ಪ್ರಯತ್ನಿಸಿದೆ" "ನಮಗೆ ಹೇಳಿ, ನೀವು ನಿಮ್ಮ ದೀಪಾವಳಿಯನ್ನು ಹೇಗೆ ಆಚರಿಸುತ್ತಿದ್ದೀರಿ ಮತ್ತು ಅದನ್ನು ವಿಶೇಷವಾಗಿಸುತ್ತಿದ್ದೀರಿ?" ಎಂದು ರಾಹುಲ್ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ "ಭಾರತವು ಸಂತೋಷದ ದೀಪಗಳಿಂದ ಬೆಳಗಲಿ, ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಪ್ರತಿ ಮನೆಯಲ್ಲೂ ಹರಡಲಿ" ಎಂದು ದೇಶದ ಜನರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net