ಬ್ರಿಟಿಷ್ ಸಂಸತ್ತಿನ ಮುಂಭಾಗ ಸಮಾಜ ಸುಧಾರಕರ ಪ್ರತಿಮೆ ನೋಡುವುದೇ ಭಾರತೀಯನಿಗೆ ಹೆಮ್ಮೆ; ರಾಹುಲ್ ಗಾಂಧಿ

Rahul Gandhi London
Published on

ಲಂಡನ್‌: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಬರೋ ಆಫ್ ಲ್ಯಾಂಬೆತ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಇದೇ ವೇಳೆ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಬ್ರಿಟಿಷ್ ಸಂಸತ್ತಿನ ಮುಂಭಾಗ ಭಾರತೀಯ ಪ್ರಜಾಪ್ರಭುತ್ವದ ಪ್ರವರ್ತಕರ ಪ್ರತಿಮೆ ಮತ್ತು ಭಾರತೀಯ ಶ್ರೇಷ್ಠ ಸಮಾಜ ಸುಧಾರಕರ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಬಸವೇಶ್ವರ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.

ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯನ್ನು 14 ನವೆಂಬರ್ 2015 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಯುನೈಟೆಡ್ ಕಿಂಗ್‌ಡಂನ ಪ್ರತಿಮೆಗಳ ಕಾಯಿದೆ, 1854ರ ಪ್ರಕಾರ ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಗಳಲ್ಲಿ ಬಸವಣ್ಣನವರ ಪ್ರತಿಮೆ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net