'ಅಮಿತ್​ ಷಾ ಅವರೇ ಶೀಘ್ರವೇ ಗುಣಮುಖರಾಗಿ' ಎಂದು ಹಾರೈಸಿದ ರಾಹುಲ್​ ಗಾಂಧಿ, ಮಮತಾ ಬ್ಯಾನರ್ಜಿ...

Rahul Gandhi
Published on

ನವದೆಹಲಿ: ಕರೊನಾ ವೈರಸ್​ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗೃಹ ಸಚಿವ ಅಮಿತ್​ ಷಾ ಅವರಿಗೆ ಶೀಘ್ರ ಗುಣಮುಖರಾಗಿ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಶುಭ ಹಾರೈಸಿದ್ದಾರೆ.

ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ ಅವರು, ಕೊವಿಡ್​-19 ಸೋಂಕಿನಿಂದ ಅಮಿತ್​ ಷಾ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನೀವು ಸಾಚಾನೇ ಆಗಿದ್ದರೆ ಬನ್ನಿ, ಏತಕ್ಕೆ ಈ ಇಲಿ- ಬೆಕ್ಕಿನ ಆಟ; ಬಿಹಾರ ಪೊಲೀಸರಿಂದ ರಿಯಾಗೆ ವಾರ್ನಿಂಗ್​!

ಹಾಗೇ, ಮಮತಾ ಬ್ಯಾನರ್ಜಿ ಅವರೂ ಕೂಡ ಟ್ವೀಟ್​ ಮಾಡಿದ್ದಾರೆ. ಗೃಹ ಸಚಿವ ಅಮಿತ್​ ಷಾ ಅವರಿಗೆ ಕರೊನಾ ಸೋಂಕು ತಗುಲಿದೆ ಎಂದು ಕೇಳ್ಪಟ್ಟೆ. ಶೀಘ್ರವೇ ಚೇತರಿಸಿಕೊಳ್ಳಲಿ. ಅವರ ಕುಟುಂಬವೂ ಸುರಕ್ಷಿತವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ಕರೊನಾದ ಪ್ರಾಥಮಿಕ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದೆ. ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಇಂದು ಅಮಿತ್​ ಷಾ ಅವರು ಟ್ವೀಟ್ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net