ಅನರ್ಹರಾದರೂ ರಾಹುಲ್ ಗಾಂಧಿ ಸಚಿನ್, ಕೊಹ್ಲಿಯಂತೆ ಉತ್ತಮ ಫಾರ್ಮ್​ನಲ್ಲಿದ್ದಾರೆ: ಸಂಜಯ್ ರಾವತ್

sanjay raut
Published on

ಮುಂಬೈ: ಯುನೈಟೆಡ್ ಸ್ಟೇಟ್ಸ್​​ಗೆ ತೆರಳಿರುವ ರಾಹುಲ್ ಗಾಂಧಿ ಅವರ ಭಾಷಣದ ಕುರಿತು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್, ರಾಹುಲ್ ಅವರನ್ನು ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಸಚಿನ್​ಗೆ ಹೋಲಿಸಿ ಮಾತನಾಡಿದ್ದಾರೆ.

ವಿದೇಶಕ್ಕೆ ತೆರಳಿರುವ ರಾಹುಲ್ ತಮ್ಮ ಭಾಷಣದ ಮುಖೇನ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಅವರ ಭಾಷಣವನ್ನು ಅನೇಕರು ಕೇಳುತ್ತಿರುವುದು ಉತ್ತಮವಾಗಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅವರ ಭಾಷಣವನ್ನು ಕೇಳಲು ಬರುತ್ತಿದ್ದಾರೆ ಎಂದು ಸಂಜಯ್ ರಾವತ್ ರಾಹುಲ್ ಅವರನ್ನು ಹೊಗಳಿದ್ದಾರೆ.

"ಅಮೇರಿಕಾದಲ್ಲಿ ತಮ್ಮ ಭಾಷಣದ ಮುಖೇನ ಅಲ್ಲಿನ ಜನರಿಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಾಹುಲ್ ಅವರು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಂತೆ ಉತ್ತಮ ಫಾರ್ಮ್​ನಲ್ಲಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡು ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದರೂ, ಆ ಎಲ್ಲಾ ಪರಿಸ್ಥಿತಿಯನ್ನು ರಾಹುಲ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ" ಎಂದು ಶಿವಸೇನೆ ನಾಯಕ ಹೇಳಿದರು.

"ನಮ್ಮ ದೇಶದಲ್ಲಿ ಪ್ರಸ್ತುತ ಏನು ನಡೆಯುತ್ತಿದೆಯೋ ಅದನ್ನೇ ರಾಹುಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಮೋದಿ ಜೀ ಈ ಹಿಂದೆ ಮತ್ತು 2014ರ ನಂತರ ಏನು ಮಾಡಿದ್ದಾರೋ ಅದನ್ನೇ ರಾಹುಲ್ ಗಾಂಧಿ ಕೂಡ ಇಂದು ವಿದೇಶದಲ್ಲಿ ಮಾತನಾಡುತ್ತಿದ್ದಾರೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net