More

    ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಪಡೆದುಕೊಂಡ ‘ಪಿಂಕಿ ಎಲ್ಲಿ’ ಚಿತ್ರ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆ

    ಬೆಂಗಳೂರು: ‘ಪಿಂಕಿ ಎಲ್ಲಿ’ ಸಿನಿಮಾ ಪೃಥ್ವಿ ಕೊಣನೂರ್ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಒಂದಷ್ಟು ಪ್ರಶಸ್ತಿ, ಮೆಚ್ಚುಗೆಯನ್ನು ಪಡೆದುಕೊಂಡಿರುವ ಈ ಚಿತ್ರ, ಈಗ ಜೂನ್ 02 ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ.

    ಇದನ್ನೂ ಓದಿ : ಮೊಬೈಲ್ ಉಪಯೋಗಿಸಲು ಬಿಡದ ಅತ್ತೆ; ಆತ ಗನ್​ ಹಿಡಿದು ಬಂದೇ ಬಿಟ್ಟ!

    ಅನೇಕ ನಿರ್ದೇಶಕರ ಪೈಕಿ ಪ್ರಥ್ವಿ ಕೊಣನೂರು ತಾವು ಭಿನ್ನ ಎಂಬುದನ್ನು ಈಗಾಗಲೇ ತಮ್ಮ ಹಿಂದಿನ ಸಿನಿಮಾಗಳ ಮುಖೇನ ಸಾಬೀತು ಪಡಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಸೇರಿದಂತೆ ಹಲವೆಡೆ ಪ್ರಯಾಣ ಬೆಳೆಸಿದ ಚಿತ್ರತಂಡ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಯನ್ನು ಗಳಿಸಿ.

    ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸದ್ದು ಮಾಡದ ‘ಪಿಂಕಿ ಎಲ್ಲಿ’ ಚಿತ್ರ, ಕಳ್ಳಸಾಗಣೆಯ ಹಿಂದಿರುವ ನಿಗೂಢ ಜಗತ್ತನ್ನು ಎಳೆ ಎಳೆಯಾಗಿ ಪರಿಚಯಿಸುತ್ತದೆ. ಕಾಣೆಯಾಗುವ ಒಂದು ಮಗುವಿನ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಈ ಹಿಂದೆ ‘ರೈಲ್ವೇ ಚಿಲ್ಡ್ರನ್’, ‘ಹದಿನೇಳಂಟು’, ‘ಸವೆನ್ ಟೀನರ್ಸ್’ ಚಿತ್ರಗಳು ನಿರ್ದೇಶಕ ಪೃಥ್ವಿ ಕೊಣನೂರು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟ ವಿಶೇಷ, ವಿಭಿನ್ನ ಕಥಾಹಂದರಗಳ ಚಿತ್ರಗಳು.

    ಇದನ್ನೂ ಓದಿ : “ಜನಾರ್ದನ ರೆಡ್ಡಿ ಚಿಕ್ಕಂದಿನಿಂದಲೂ ಹಂಗೆ” ಎಂದು ವಾಗ್ದಾಳಿ ಮಾಡಿದ ಸೋಮಶೇಖರ ರೆಡ್ಡಿ!

    ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಶೇಷ ಛಾಪನ್ನು ಪರಿಚಯಿಸಿರುವ ನಿರ್ದೇಶಕ ಪೃಥ್ವಿ ಕೊಣನೂರು, ಇದೀಗ ತಮ್ಮ ನಿರ್ದೇಶನದಲ್ಲಿ ಅರಳಿದ ಮೂರನೇ ಚಿತ್ರ ‘ಪಿಂಕಿ ಎಲ್ಲಿ’ ಸಿನಿಮಾವನ್ನು ಜೂನ್ 02 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಪಿಂಕಿ ಎಲ್ಲಿ ಚಿತ್ರದಲ್ಲಿ ಹೊಸ ಕಲಾವಿದರ ಬಳಗ ಹೆಚ್ಚಿದ್ದು, ಬಿಗ್​ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ, ಲಕ್ಷ್ಮಿ ನಾರಾಯಣ, ಅನಸೂಯಾ, ದೀಪಕ್ ಸುಬ್ರಹ್ಮಣ್ಯ, ಅನೂಪ್ ಶೂನ್ಯಾ ನಟಿಸಿದ್ದಾರೆ.


    ಕೃಷ್ಣೇಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ರಾಜ್ ಅವರ ಕ್ಯಾಮೆರಾ ಕೈಳಕ ಮತ್ತು ಶಿವಕುಮಾರ ಸ್ವಾಮಿ ಅವರ ಸಂಕಲನ ಈ ಚಿತ್ರದಲ್ಲಿದೆ. ಒಟ್ಟಾರೆ ಸಾಕಷ್ಟು ನಿರೀಕ್ಷೆ, ಭರವಸೆ ಮೂಡಿಸಿರುವ ‘ಪಿಂಕಿ ಎಲ್ಲಿ’ ಸಿನಿಮಾ ಪ್ರೇಕ್ಷಕರಿಂದ ಏನೆಲ್ಲಾ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts